• November 30, 2021

ಯಶೋಮಾರ್ಗದ ಮೂಲಕ ಮತ್ತೊಂದು ಮಹತ್ವದ ಕೆಲಸಕ್ಕೆ ಯಶ್ ಚಾಲನೆ!

ಯಶೋಮಾರ್ಗದ ಮೂಲಕ ಮತ್ತೊಂದು ಮಹತ್ವದ ಕೆಲಸಕ್ಕೆ ಯಶ್ ಚಾಲನೆ!

ನಟ ರಾಕಿಂಗ್ ಸ್ಟಾರ್ ಯಶ್ ನಟನೆ ಮೂಲಕ ಪ್ರೇಕ್ಷಕರನ್ನ ರಂಜಿಸೋದ್ರ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ..ಸದ್ಯ ಯಶ್ ಯಶೋಮಾರ್ಗ ದ ಮೂಲಕ ಪುರಾತನ ಕಾಲದ ಪುಷ್ಕರಣಿಯ ಪುನಶ್ಚೇತನ ಕೆಲಸವನ್ನ ಮಾಡುತ್ತಿದ್ದಾರೆ ಈ ವೇಳೆ ಪುಷ್ಕರಣಿ ಪುನಶ್ಚೇತನಕ್ಕೆ ಕಾಂಕ್ರೀಟ್ ಬಿಟ್ಟು ಮಣ್ಣಿನಿಂದ ಕಟ್ಟಡ ಕಟ್ಟಲಾಗುತ್ತಿದೆ …

ಯಶೋಮಾರ್ಗ ಚಾರಿಟಿ ಟ್ರಸ್ಟ್ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಐತಿಹಾಸಿಕ ಪುಷ್ಕರಣಿಯ ಪುನಶ್ಚೇತನ ಕೆಲಸ ನಡೆಯುತ್ತಿದೆ ಇಲ್ಲಿ ಕಾಂಕ್ರೀಟ್ ಮರೆತು ಮಣ್ಣಿನ ಕಡೆ ಗಮನ ನೀಡಿದ್ದಾರೆ ಈ ಕುರಿತು ಪರಿಸರ ಪ್ರೇಮಿ ಶಿವಾನಂದ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ …

ಈ ಪುಷ್ಕರಣಿ 4ಶತಮಾನಗಳ ಹಿಂದೆ ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಿಲಾಗಿದು… ಮರೆತು ಹೋದ ಪರಂಪರೆ ಕೌಶಲ್ಯ ಮತ್ತೆ ಬೆಳೆಸಿ ಮರುನಿರ್ಮಾಣ ಮಾಡುತ್ತಿರೋದು ಎಲ್ಲರಿಗೂ ಖುಷಿ ತಂದಿದೆ

Leave a Reply

Your email address will not be published. Required fields are marked *