- November 30, 2021
ಮೀಟೂ ಕೇಸ್ ನಲ್ಲಿ ನಟಿ ಶ್ರುತಿ ಹರಿಹರನ್ ಗೆ ಹಿನ್ನಡೆ
ಸರ್ಜಾ ಫ್ಯಾಮಿಲಿಯ ಪ್ರತಿಕ್ರಿಯೆ ಹೀಗಿತ್ತು ..


ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಅವರು ಸರ್ಜಾ ಪ್ರಜ್ಞಾವಂತರಲ್ಲಿ ಮೀಟೂ ಆರೋಪ ಹೊರೆಸಿದ್ದು ಎಲ್ಲರಿಗೂ ಗೊತ್ತೇ ಇದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು ನಟಿ ಶ್ರುತಿ ಹರಿಹರನ್ ಆದರೆ ಅವರ ಆರೋಪಕ್ಕೆ ಸೂಕ್ತ ಸಾಕ್ಷ್ಯ ಸಿಗದ ಕಾರಣ ಪೊಲೀಸರು ಬಿ ರಿಪೋರ್ಟ್ ಸಿದ್ಧಪಡಿಸಿದ್ದಾರೆ ಎಂದು ಕೆಲವೇ ದಿನಗಳ ಹಿಂದೆ ಕೇಳಿಬಂದಿತ್ತು …

ಸೂಕ್ತ ಸಾಕ್ಷಿ ಇಲ್ಲದ ಕಾರಣ ಈ ಕೇಸ್ ನಲ್ಲಿ ನಟಿ ಶ್ರುತಿ ಹರಿಹರನ್ ಅವರಿಗೆ ಹಿನ್ನಡೆಯಾಗಿದೆ …ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ತೀರ್ಪಿಗೆ ಸಂಬಂಧಿಸಿದಂತೆ ಸರ್ಜಾ ಕುಟುಂಬಸ್ಥರು ಇನ್ ಸ್ಟಾಗ್ರಾಂ ನಲ್ಲಿ ತಮ್ಮ ಅಭಿಪ್ರಾಯವನ್ನ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ..
ನಟ ಧ್ರುವಾ ಸರ್ಜಾ ..ಧ್ರುವಾ ಪತ್ನಿ ಪ್ರೇರಣ ಹಾಗೂ ಮೇಘನಾ ರಾಜ್ ಮೂವರು ಧರ್ಮೋ ರಕ್ಷಿತಾ ರಕ್ಷಿತಃ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ..ಇದ್ರ ಜೊತೆಗೆ ಬ್ಯಾಟ್ ಮಲ್ಲಿ ಸೊಳ್ಳೆ ಹೊಡೆಯೋ ವಿಡಿಯೋ ಕ್ಲಿಪ್ ಹಾಕಿ ಸೊಳ್ಳೆ .ಕ್ರಿಮಿ .ಕೀಟಗಳು ನಮ್ಮ ಮುಂದೆ ನಿಲ್ಲೋದಿಲ್ಲ ಎನ್ಮುವ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…ಒಟ್ಟಾರೆ ಅರ್ಜುನ್ ಸರ್ಜಾ ಅವ್ರಿಗೆ ಈ ಕೇಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕಿರೋದು ಅವ್ರ ಅಭಿಮಾನಿಗಳಿಗೆ ಹಾಗೂ ಫ್ಯಾಮಿಲಿಯವರಿಗೆ ಖುಷಿ ತಂದಿದೆ…

