- January 3, 2022
ಗೋವಾದಲ್ಲಿ ಹೊಸ ವರ್ಷವನ್ನ ವೆಲ್ಕಂ ಮಾಡಿದ ರಾಕಿಂಗ್ ಜೋಡಿ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಹೊಸ ವರ್ಷ ಗೋವಾದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.. ಎಲ್ಲರಿಗೂ ತಿಳಿದಿರುವಂತೆ ರಾಧಿಕಾ ಪಂಡಿತ್ ಅವರ ತವರುಮನೆ ಗೋವಾ… ಈಗಲೂ ಕೂಡ ಅವರ ಅಜ್ಜಿ ಫ್ಯಾಮಿಲಿ ಗೋವಾದಲ್ಲಿಯೇ ಇದ್ದು ರಜಾ ದಿನಗಳನ್ನ ಬಹುತೇಕವಾಗಿ ರಾಧಿಕಾ ಮತ್ತು ಯಶ್ ಗೋವಾದಲ್ಲಿಯೇ ಕಳೆಯುತ್ತಾರೆ…

ಯಶ್ ಮತ್ತು ರಾಧಿಕಾಗೆ ಗೋವಾ ಹಾಟ್ ಫೇವರೀಟ್ ಪ್ಲೇಸ್ ಅದಕ್ಕಾಗಿಯೇ ಅವರ ನಿಶ್ಚಿತಾರ್ಥವು ಕೂಡ ಗೋವಾದಲ್ಲಿ ಜರುಗಿತ್ತು… ಅದಷ್ಟೇ ಅಲ್ಲದೆ ಬಿಡುವಿದ್ದಾಗೆಲ್ಲ ಇಬ್ಬರೂ ಗೋವಾಗೆ ಪ್ರವಾಸ ಮಾಡುತ್ತಾರೆ.. ಅದರಂತೆಯೇ ಈ ವರ್ಷದ ನ್ಯೂ ಇಯರ್ ಪಾರ್ಟಿಯನ್ನ ಗೋವಾದಲ್ಲಿಯೇ ಸೆಲೆಬ್ರೇಟ್ ಮಾಡಿದ್ದಾರೆ..

ವಿಶೇಷವೆಂದರೆ ಈ ಬಾರಿ ರಾಧಿಕಾ ಯಶ್ ಜೊತೆಯಲ್ಲಿ ಯಶ್ ಸಹೋದರಿ ಕುಟುಂಬ ಕೂಡ ಗೋವಾದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ..
ಸದ್ಯ ರಾಕಿಂಗ್ ಫ್ಯಾಮಿಲಿಯ ನ್ಯೂ ಇಯರ್ ಪಾರ್ಟಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ..


