- January 2, 2022
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ನಟಿ ಸಂಜನಾ ಗರ್ಲಾನಿ ..

ಸ್ಯಾಂಡಲ್ ವುಡ್ ನ ನಟಿ ಸಂಜನಾ ಗರ್ಲಾನಿ ಇತ್ತೀಚೆಗಷ್ಟೇ ಮದುವೆಯಾಗಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು ಅದಷ್ಟೇ ಅಲ್ಲದೆ ಮದುವೆಯಾದ ಕೆಲವೇ ದಿನಗಳಲ್ಲಿ ಸಂಜನಾ ಡಿಯು ಪಡೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿತ್ತು ..

ಈ ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಹಾಕಿ ನಟಿ ಸಂಜನಾ ತಾನು ತಾಯಿಯಾಗುತ್ತಿದ್ದೇನೆ ಎಂಬುವ ಸಿಹಿ ವಿಚಾರವನ್ನ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ವಿಶೇಷವಾಗಿ ಕೊಟ್ಟಿದ್ದಾರೆ ..
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಜನಾ ಡಾಕ್ಟರ್ ಆಸೀಫ್ ಪಾಷಾ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ ಎನ್ನುವ ವಿಷಯ ರಿವಿಲ್ ಆಗಿತ್ತು ಈಗ ತಾನು ತಾಯಿಯಾಗುತ್ತಿದ್ದೇನೆ ಎಂಬ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ ಸಂಜನಾ

ಸದ್ಯ 5ತಿಂಗಳ ಗರ್ಭಿಣಿಯಾಗಿರುವ ಸಂಜನಾ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಇತ್ತೀಚೆಗಷ್ಟೆ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿರುವ ಸಂಜನಾ ತಮ್ಮ ಡೆಲಿವರಿಯ ದಿನಾಂಕ ಕ್ಕೆ 2ವಾರ ಇರುವತನಕವೂ ತಾವು ಸಿನಿಮಾಗಳು ಹಾಗೂ ಸಿನಿಮಾ ಕೆಲಸಗಳಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ …ಆದರೆ ಇಷ್ಟು ದಿನ ಕಾಲ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನರಂಜಿಸುವ ಸಂಜನಾ ಈಗ ತಾಯಿಯಾಗಿ ತಾಯ್ತನದ ಖುಷಿಯನ್ನು ಅನುಭವಿಸಲು ಸಿದ್ಧರಾಗಿ ದ್ದಾರೆ
