- January 3, 2022
ಟಾಲಿವುಡ್ ಗೆ ಅಧಿಕೃತ ಎಂಟ್ರಿ ಪಡೆದ ಸ್ಯಾಂಡಲ್‌ವುಡ್ ಕರಿಚಿರತೆ !

ಸ್ಯಾಂಡಲ್‌ವುಡ್ ನ ಕರಿಚಿರತೆ ಅಂತಾನೇ ಪ್ರಖ್ಯಾತಿ ಪಡೆದಿರೋ ನಟ ದುನಿಯಾ ವಿಜಯ್ ಸದ್ಯ ಕೇವಲ ನಾಯಕ ನಟನಷ್ಟೇ ಅಲ್ಲ ನಿರ್ದೇಶಕನೂ ಹೌದು…
ನಾಯಕನಾಗಲು ಕೇವಲ ಬಣ್ಣ ಬೇಕಿಲ್ಲ ಅನ್ನೋದನ್ನ ಸಾಭೀತು ಮಾಡಿ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳ ಮನಸ್ಸು ಗೆದ್ದ ನಟ ವಿಜಯ್..ಇತ್ತೀಚೆಗಷ್ಟೇ ಸಲಗ ಸಿನಿಮಾ ನಿರ್ದೇಶನ ಮಾಡುವ ಮೂಲಕ ತಮ್ಮ ಒಳಗೊಬ್ಬ ನಿರ್ದೇಶಕನೂ ಇದ್ದಾನೆ ಅನ್ನೋದನ್ನ ತೋರಿಸಿಕೊಟ್ಟ ವಿಜಯ್ ಈಗ ಟಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಎಂಟ್ರಿ ಪಡೆದುಕೊಂಡಿದ್ದಾರೆ…

ಹೌದು ದುನಿಯಾ ವಿಜಯ್ ನಂದಮೂರಿ ಬಾಲಕೃಷ್ಣ ಅಭಿನಯದ ಮುಂದಿನ ಚಿತ್ರದಲ್ಲಿ ಆಕ್ಟ್ ಮಾಡೋದು ಕನ್ಫರ್ಮ್ ಆಗಿದೆ…ಮೈತ್ರಿ ಪ್ರೊಡಕ್ಷನ್ಸ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಚಿತ್ರದಲ್ಲಿ ವಿಜಯ್ ವಿಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರ್ತಿದೆ…ಇನ್ನು ಅದಕ್ಕಾಗಿ ಈಗಾಗಲೇ ವಿಜಯ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದು ಈ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ವಿಜಯ್ ಶೂಟಿಂಗ್ ಗಾಗಿ ಹೈದ್ರಾಬಾದ್ ತೆರಳಲಿದ್ದಾರೆ…