- February 22, 2022
ಉಪ್ಪಿ ಅಣ್ಣನ ಮಗನಿಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಡಿಮ್ಯಾಂಡ್

ನಿರಂಜನ್ ಸುಧೀಂದ್ರ …ಸದ್ಯ ಸ್ಯಾಂಡಲ್ ವುಡ್ ನಲ್ಲಿ ಯಂಗ್ ಹೀರೋ ಲಿಸ್ಟ್ನಲ್ಲಿ ನಿಂತಿರೋ ಮೊದಲ ನಾಯಕ ನಟ…. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಮಗನಾದ ನಿರಂಜನ್ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ …ಈಗಾಗಲೇ ಬಾಲಕಲಾವಿದನಾಗಿ ಚಿಕ್ಕಪ್ಪನ ಜತೆ ತೆರೆಹಂಚಿಕೊಂಡಿದ್ದ ನಿರಂಜನ್ ಕೆಲವು ವರ್ಷಗಳ ಹಿಂದೆ ಪ್ರಿಯಾಂಕ ಉಪೇಂದ್ರ ಅವರ ಜೊತೆಯಲ್ಲಿಯೂ ತೆರೆ ಹಂಚಿಕೊಂಡಿದ್ದರು….

ಸದ್ಯ ನಿರಂಜನ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ …ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೆಲವೇ ದಿನಗಳಲ್ಲಿ ನಿರಂಜನ್ ಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದ್ದು ಸ್ಟಾರ್ ನಿರ್ದೇಶಕರು ನಿರಂಜನ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ….
ಇನ್ನು ನಿರಂಜನ್ ಕೂಡ ಚಿತ್ರರಂಗಕ್ಕೆ ಏಕಾ ಏಕಿ ದುಮುಕಿಲ್ಲ…ನಾಯಕನಾಗಲು ಬೇಕಿರುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.. ಡ್ಯಾನ್ಸ್ ,ಫೈಟ್ ಫಿಟ್ನೆಸ್ ಎಲ್ಲವನ್ನು ಕಲಿತು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ….

ಈಗಾಗಲೇ ನಿರಂಜನ್ ಕೈಯಲ್ಲಿ 4 ಸಿನಿಮಾಗಳಿವೆ..
4 ಚಿತ್ರದಲ್ಲಿಯೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಿರುವ ನಿರಂಜನ ಅಭಿನಯದ ಸೂಪರ್ ಸ್ಟಾರ್ ಹಾಗೂ ಹಂಟರ್ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆ...ಇನ್ನು ನಮ್ಮ ಹುಡುಗರು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ…