• February 22, 2022

ಪತ್ನಿಯ ಸೀಮಂತದಂದು ನೇತ್ರದಾನ ಮಾಡಿದ ಗೋವಿಂದೇಗೌಡ

ಪತ್ನಿಯ ಸೀಮಂತದಂದು ನೇತ್ರದಾನ ಮಾಡಿದ ಗೋವಿಂದೇಗೌಡ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಹಾಗೂ ದಿವ್ಯಶ್ರೀ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ದಿವ್ಯಶ್ರೀ ಅವರ ಸೀಮಂತ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಗೋವಿಂದೇ ಗೌಡ ಕುಟುಂಬ ನೇತ್ರದಾನಕ್ಕೆ ಸಹಿ ಹಾಕಿದೆ. ಈ ವಿಷಯವನ್ನು ಗೋವಿಂದೇಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“ನೇತ್ರದಾನದ ಶ್ರೇಷ್ಟತೆಯನ್ನು ಜಗತ್ತಿಗೆ ಸಾರಿದ ಮಾನವೀಯ ನಟರಾದ ಪುನೀತ್ ರಾಜಕುಮಾರ್ ಅವರಿಗೆ ಕೃತಜ್ಞತಾ ಪೂರ್ವಕವಾಗಿ ನನ್ನ ಪತ್ನಿ ದಿವ್ಯಶ್ರೀಯವರ ‌ಸೀಮಂತ ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ಐ ಬ್ಯಾಂಕ್ ನ ಚೇರ್ಮನ್ ಡಾಕ್ಟರ್ ಭುಜಂಗ ಶೆಟ್ಟಿ ಸರ್ ಅವರ ಸಹಕಾರದೊಂದಿಗೆ ಡಾ. ರಾಜಕುಮಾರ್ ಐ ಬ್ಯಾಂಕ್ ನ ಮ್ಯಾನೇಜರ್ ವೀರೇಶ್ ರವರ ಸಮ್ಮುಖದಲ್ಲಿ ನಾನು ,ನನ್ನ ಪತ್ನಿ ಹಾಗೂ ಬಂಧು ಬಳಗ ನೇತ್ರದಾನ ಮಾಡಿದ್ದು ಜೀವನದ ಒಂದು ಸಾರ್ಥಕತೆ ಅನಿಸಿತು”ಎಂದು ಸೋಶಿಯಲ್ ಮೀಡಿಯಾದಲ್ಲಿ ಗೋವಿಂದೇಗೌಡ ಹಂಚಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಗೋವಿಂದೇಗೌಡ ಹಾಗೂ ದಿವ್ಯಶ್ರೀ ಭಾಗವಹಿಸಿದ್ದರು. ಸ್ನೇಹ ಪ್ರೀತಿಗೆ ತಿರುಗಿತು. ಮನೆಯವರ ಒಪ್ಪಿಗೆ ಪಡೆದು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Leave a Reply

Your email address will not be published. Required fields are marked *