- December 21, 2021
ಯಶ್ ನಟನೆಯ ಕೆಜಿಎಫ್ ಗೆ 3 ವರುಷ…ನಂತರ ಏನೆಲ್ಲಾ ಬದಲಾವಣೆಗಳಾಯಿತು..!?

ಇಡೀ ದೇಶವೇ ಮೆಚ್ಚಿಕೊಂಡ ಸಿನಿಮಾ KGF. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣಗೊಂಡು, ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಯಶ್ ನಾಯಕನಟನಾಗಿ ಅಭಿನಯಿಸರುವ ಸಿನಿಮಾ KGF.

ಹಲವರ ಜೀವನ ಪಥವನ್ನು ಬದಲಿಸಿದ, ಹಲವರ ಕನಸಿನ ಕೂಸಾಗಿದ್ದ ಸಿನಿಮಾ KGF. ಮೂರು ವರುಷಗಳ ಹಿಂದೆ ಇದೇ ದಿನದಂದು ಪ್ರೇಕ್ಷಕರಿಗೆ ತಲುಪಿತ್ತು. ಉಗ್ರಂ ಸಿನಿಮಾದಿಂದ ಹೆಸರು ಮಾಡಿದ್ದ ಪ್ರಶಾಂತ್ ನೀಲ್ ಕೆಜಿಎಫ್ ನ ರೂವಾರಿ. KGF ತೆರೆ ಕಂಡ ನಂತರ ನಡೆದಿದ್ದೆಲ್ಲಾ ಘತವೈಭವ.

2018 ಡಿಸೆಂಬರ್ 21 ರಂದು ಕನ್ನಡ ಮಾತ್ರವಲ್ಲದೇ ತೆಲುಗು,ತಮಿಳು,ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಂಡು ಇಡೀ ದೇಶವೇ ಕನ್ನಡ ಚಿತ್ರರಂಗವನ್ನು ನೋಡುವ ರೀತಿ ಬದಲಾಯಿತು.

ಹಿಂದಿ ಭಾಷೆ ಒಂದರಲ್ಲೇ ಬರೊಬ್ಬರಿ 44 ಕೋಟಿ ಕಲೆಕ್ಷನ್ ಆಗಿತ್ತು. ಒಟ್ಟಾರೆ ಬಿಡುಗಡೆ ನಂತರ ನಡೆದದ್ದೆಲ್ಲವೂ ಹಿಸ್ಟರಿ. ಆ ನಂತರ KGF 2 ಚಿತ್ರೀಕರಣ ಪ್ರಾರಂಭವಾಗಿ ಇದೀಗ 2022 ಏಪ್ರಿಲ್ 14ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.