- December 21, 2021
ಟಾಲಿವುಡ್ ನಿರ್ದೇಶಕನ ಜೊತೆ ಕಿಚ್ಚ ಸುದೀಪ್ ಹೊಸ ಸಿನಿಮಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ…ಕಬ್ಜ ಚಿತ್ರದಲ್ಲಿ ವಿಶೇಷ ಪಾತ್ರದ ಮೂಲಕ ಕಾಈಸಿಕೊಳ್ತಿರೋ ಕಿಚ್ಚನಿಗೆ ಬಾಲಿವುಡ್. ಟಾಲಿವುಡ್ ಅಂಗಳದಲ್ಲಿಯೂ ಬಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ…ಸದ್ಯ ಕಿಚ್ಚನಿಗೆ ಆಕ್ಷನ್ ಕಟ್ ಹೇಳಲು ಟಾಲಿವುಡ್ ನ ಡೈರೆಕ್ಟರ್ ಸಜ್ಜಾಗ್ತಿದ್ದಾರಂತೆ..ಈ ಬಗ್ಗೆ ಕಿಚ್ಚನೆ ಹಿಂಟ್ ಕೊಟ್ಟಿದ್ದಾರೆ…


ಟಾಲಿವುಡ್ ಅಂಗಳದಲ್ಲಿ ಸಾಹೋ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕನಾದ ಸುಜೀತ್ ಜೊತೆ ಕಿಚ್ಚ ಕೆಲಸ ಮಾಡೋದು ಕನ್ಫರ್ಮ್ ಆಗಿದೆ…ಈಗಾಗಲೇ ಕಥೆಯ ಬಗ್ಗೆ ಮಾತುಕಥೆ ನಡೆದಿದ್ದು ಕಿಚ್ಚ ಕೂಡ ಸುಜೀತ್ ಒಟ್ಟಿಗೆ ಕೆಲಸ ಮಾಡುವ ಎಲ್ಲಾ ಸಾಧ್ಯತೆ ಇದ್ಯಂತೆ…

ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರೋ ಕಿಚ್ಚನಿಗೆ ಆಕ್ಷನ್ ಕಟ್ ಹೇಳಲು ಎಲ್ಲರೂ ಆಸಕ್ತಿ ತೋರುತ್ತಾರೆ ಅದರಂರೆ ಸುಜಿತ್ ಕೂಡ ಸುದೀಪ್ ಜೊತೆ ಕೆಲಸ ಮಾಡೋ ಆಸೆ ವ್ಯಕ್ತ ಪಡಿಸಿದ್ದಾರೆ…ಅದರಂತೆಯೇ ಸುಜಿತ್ ಜೊತೆ ಸಿನಿಮಾ ಬಗ್ಗೆ ಮಾತಕಥೆ ನಡೆದಿದ್ದು ಸುಜಿತ್ ಇಂಟ್ರೆಸ್ಟಿಂಗ್ ಮತ್ತು ಹೈ ಎನರ್ಜಿ ಇರೋ ವ್ಯಕ್ತಿ ಎನ್ನಿಸುತ್ತಾರೆ..ಇಬ್ಬರು ಒಟ್ಟಿಗೆ ಸಿನಿಮಾ ಮಾಡೋ ಆಲೋಚನೆ ಇದ್ದು ಆದಷ್ಟು ಬೇಗ ಈ ಬಗ್ಗೆ ಅಪ್ಡೇಟ್ ಸಿಗಲಿದೆ ಎಂದಿದ್ದಾರೆ…ಎಲ್ಲವೂ ಅಂದುಕೊಂಡಂತೆ ಆದ್ರೆ ಸಾಹೋ ನಿರ್ದೇಶಕ ಕಿಚ್ಚನಿಗೆ ಆಕ್ಷನ್ ಕಟ್ ಹೇಳೊದು ಕನ್ಫರ್ಮ್ ಆಗಲಿದೆ….
