- December 20, 2021
ಕಿಚ್ಚನ ಬಾಡಿಗಾರ್ಡ್ ಜೊತೆ ವಿಡಿಯೋ ಕಾಲ್ ನಲ್ಲಿ ದೀಪಿಕಾ ಪಡುಕೋಣೆ ಮಾತು

ಕಿಚ್ಚ ಸುದೀಪ್ …ಕನ್ನಡ ಚಿತ್ರರಂಗ ಕಂಡ ಅದ್ಬುತ ಕಲಾವಿದ…ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾರಂಗದಲ್ಲಿಯೂ ಕಿಚ್ಚನ ಗತ್ತು ಜೋರಾಗಿಯೇ ಇದೆ…ಇನ್ನು ಬಾಲಿವುಡ್ ಮಂದಿಗೂ ಕಿಚ್ಚ ಪರಿಚಯ ಜೋರಾಗಿಯೇ ಇದೆ…ಇನ್ನು ಕನ್ನಡತಿ ದೀಪಿಕಾಪಡುಕೋಣೆಗೂ ಸುದೀಪ್ ಪರಿಚಯ ಚೆನ್ನಾಗಿಯೇ ಇದೆ…ಆದ್ರೆ ದೀಪಿಕಾ ಪಡುಕೋಣೆ ಕಿಚ್ಚನ ಬಾಡಿಗಾರ್ಡ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ ಅದು ಕನ್ನಡದಲ್ಲಿ ಅನ್ನೋದು ವಿಶೇಷ.…

ಕಿಚ್ಚನ ಬಾಡಿಗಾರ್ಡ್ ಗೂ ದೀಪಿಕಾ ಪಡುಕೋಣೆಗೂ ಹೇಗೆ ಪರಿಚಯ… ದೀಪಿಕಾ ಯಾಕೆ ಅವ್ರಿಗೆ ವಿಡಿಯೋ ಕಾಲ್ ಮಾಡಬೇಕು ಅನ್ನೋ ಕ್ಯೂರಿಯಾಸಿಟಿ ನಿಮಗೂ ಇರತ್ತೆ..ಅದಕ್ಕೆ ಉತ್ತರ ಇಲ್ಲಿದೆ…ಕಿಚ್ಚನ ಬಾಡಿಗಾರ್ಡ್ ಕಿರಣ್…ಕಿಚ್ಚ ಕಿರಣ್ ಅಂತಾನೆ ಫೇಮಸ್ ಆಗಿರೋ ಕಿರಣ್ ತಮಗಿಷ್ಟವಾದ ವ್ಯಕ್ತಿಗಳ ಹೆಸರನ್ನ ತಮ್ಮ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ..ಅದ್ರಲ್ಲಿ ದೀಪಿಕಾ ಪಡುಕೋಣೆ ಹೆಸರು ಕೂಡ ಇದೆ…


ಇತ್ತೀಚೆಗೆ ಹಿಂದಿಯ 83 ಸಿನಿಮಾದ ಸುದ್ದಿಗೋಷ್ಟಿ ಬೆಂಗಳೂರಿನಲ್ಲಿ ನಡೆಯಿತು..ಕಿಚ್ಚ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ರು…ಆ ಸಮಯದಲ್ಲಿ ಕಿರಣ್ ಕೈ ಮೇಲೆ ದೀಪಿಕಾ ಹೆಸರು ಇರೋದನ್ನ ರಣವೀರ್ ಸಿಂಗ್ ಗಮನಿಸಿದ್ದಾರೆ…ಇದು ಸಖತ್ ಸ್ಪೆಷಲ್ ಹಾಗೂ ಇಂಟ್ರೆಸ್ಟಿಂಗ್ ಎನ್ನಿಸಿ ಅಲ್ಲೆ ದೀಪಿಕಾ ಗೆ ವಿಡಿಯೋ ಕಾಲ್ ಮಾಡಿ ಕಿರಣ್ ಕೈ ತೋರಿಸಿದ್ದಾರೆ..ಇನ್ನು ಸ್ಪೆಷಲ್ ಅಂದ್ರೆ ದೀಪಿಕಾ ಪಡುಕೋಣೆ ಕಿರಣ್ ಜೊತೆಯಲ್ಲಿ ಕನ್ನಡದಲ್ಲೇ ಮಾತನಾಡಿದ್ದಾರೆ…ಇದರಿಂದ ಕಿರಣ್ ಸಖತ್ ಖುಷಿಯಾಗಿದ್ದಾರೆ…