- January 24, 2022
ಹಸೆಮಣೆ ಏರಲು ಸಿದ್ದರಾದ ಶುಭ್ರ ಅಯ್ಯಪ್ಪ

ನಟಿ ಶುಭ್ರ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ ಹೌದು ಶುಭ್ರ ಅಯ್ಯಪ್ಪ ತಾವು ಎಂಗೇಜ್ ಮೆಂಟ್ ಮಾಡಿಕೊಂಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ ..

ತನ್ನ ಭಾವಿ ಪತಿ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿರೋ ಪೋಟೋ ಹಂಚಿಕೊಂಡಿರೋ ನಟಿ ವಿಶಾಲ್ ಅನ್ನೋ ಹುಡುಗನನ್ನ ಮದುವೆ ಆಗುತ್ತಿದ್ದಾರೆ …
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎಂಗೇಜ್ ಆಗಿರೋ ಬಗ್ಗೆ ತಿಳಿಸಿರೋ ನಟಿ..ಶಿವರಾಜ್ ಕುಮಾರ್ ರ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು…


ಶುಭ್ರ ಕೈಹಿಡಿಯಲು ಸಿದ್ಧರಾಗಿರುವ ಹುಡುಗ ಉದ್ಯಮಿಯೂ ಆಗಿದ್ದು ಅದರ ಜೊತೆಗೆ ಸ್ಪೋರ್ಟ್ಸ್ ಮಾಸ್ಟರ್ ಕೂಡ ಆಗಿದ್ದಾರೆ ಚಿತ್ರರಂಗದಲ್ಲೂ ಕೂಡ ಗುರುತಿಸಿಕೊಂಡಿರುವಂತಹ ವಿಶಾಲ್ ಹಾಗೂ ಶುಭ್ರ ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದರು ಸದ್ಯ ಈಗ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ …
