- January 24, 2022
ಆರೇ ತಿಂಗಳಿಗೆ ಜನಿಸಿತ ಪ್ರಿಯಾಂಕ ಹಾಗೂ ನಿಕ್ ಮಗು

ಸಾಮಾನ್ಯವಾಗಿ ೯ ತಿಂಗಳಿಗೆ ಮಗು ಹುಟ್ಟುವುದು ಕಾಮನ್ …ಇನ್ನು ಹೆಚ್ಚೇಂದರೆ 9ತಿಂಗಳು 9ದಿನಕ್ಕೆ ಮಗು ಜನಿಸುತ್ತದೆ ಆದರೆ ಇತ್ತೀಚೆಗಷ್ಟೇ ನಾವಿಬ್ಬರೂ ಬಾಡಿಗೆ ತಾಯಿಯಿಂದ ಮಗುವನ್ನು ಪಡೆದಿದ್ದೇವೆ ಎಂದು ಘೋಷಣೆ ಮಾಡಿರುವ ಪ್ರಿಯಾಂಕ ಛೋಪ್ರಾ ಅವರ ಮಗು 6ತಿಂಗಳಿಗೆ ಜನಿಸಿದೆಯಂತೆ ..
ಹೌದು ಪ್ರಿಯಾಂಕಾ ಛೋಪ್ರಾ ಗುರುತು ಮಾಡಿದಂತಹ ಬಾಡಿಗೆ ತಾಯಿಯು ಏಪ್ರಿಲ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿ ಪ್ರಿಯಾಂಕಾ ಮತ್ತು ನಿಕ್ ಆ ತಿಂಗಳಲ್ಲಿ ಯಾವುದೇ ಕೆಲಸಗಳನ್ನೂ ಒಪ್ಪಿಕೊಳ್ಳದೇ ಬಿಡುವು ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಮೂರು ತಿಂಗಳು ಮುಂಚಿತವಾಗಿ ಈ ಮಗು ಜನಿಸಿದೆ. ಇದೊಂದು ಪ್ರೀ-ಮೆಚ್ಯೂರ್ ಮಗುವಾಗಿದ್ದು, ಅದರ ಆರೋಗ್ಯದ ಬಗ್ಗೆ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ದಂಪತಿಗೆ ಚಿಂತೆ ಶುರುವಾಗಿದೆ..ಹಾಗಾಗಿ ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದು ಎಲ್ಲೂ ಕೂಡ ಮಗುವಿನ ಫೋಟೋ ಆಗಲಿ ಅಥವಾ ಮಗುವಿನ ವಿಚಾರವನ್ನಾಗಲೀ ಹಂಚಿಕೊಂಡಿಲ್ಲ

ಲಾಸ್ ಏಂಜಲಿಸ್ ಹೊರವಲಯದಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಮಗು ಜನಿಸಿದೆ. ಆರೂವರೆ ತಿಂಗಳಿಗೆ ಜನಿಸಿದ ಮಗು ಆದ್ದರಿಂದ ಈಗಲೇ ಮನೆಗೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಈ ಮಗುವಿಗೆ ಆಸ್ಪತ್ರೆಯಲ್ಲಿ ವಿಶೇಷ ಆರೈಕೆ ಮಾಡಿ, ನಂತರದ ದಿನಗಳಲ್ಲಿ ಮನೆಗೆ ಕರೆದುಕೊಂಡು ಬರಲು ದಂಪತಿ ನಿರ್ಧರಿಸಿದ್ದಾರೆ. ಈ ಕುರಿತು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಕ್ ಇನ್ನಷ್ಟೇ ಮೌನ ಮುರಿಯಬೇಕಿದೆ.