- February 17, 2022
ಕಿರುತೆರೆಗೆ ಕಾಲಿಟ್ಟ ಲವ್ಲಿ ಕಪಲ್ಸ್… ಕಾರಣ ಇಲ್ಲಿದೆ ನೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ 809 ಸಂಚಿಕೆ ಪೂರೈಸಿದೆ. ಇದೀಗ ಧಾರಾವಾಹಿಯಲ್ಲಿ ಹೊಸ ಕಥೆಯು ಆರಂಭವಾಗಿದ್ದು ಸದ್ಯ ಮದುವೆಯ ಸಂಚಿಕೆಗಳು ಪ್ರಸಾರವಾಗುತ್ತಿವೆ. ಇದರ ಜೊತೆಗೆ ಮದುವೆಯ ಸಂಚಿಕೆಗಾಗಿ ವಿಶೇಷ ಅತಿಥಿಗಳನ್ನು ಸ್ವಾಗತಿಸಲು ನಮ್ಮನೆ ಯುವರಾಣಿ ತಂಡ ಸಜ್ಜಾಗಿದೆ. ಅ ಅತಿಥಿಗಳು ಯಾರು ಎಂಬ ಕುತೂಹಲ ನಿಮಗಿದೆಯೇ? ಅವರು ಬೇರಾರೂ ಅಲ್ಲ, ಕನ್ನಡ ಸಿನಿರಂಗದ ಲವ್ಲಿ ಕಪಲ್ ಎಂದೇ ಜನಪ್ರಿಯತೆ ಪಡೆದಿರುವ
ಹಿತಾ ಚಂದ್ರಶೇಖರ್ ಹಾಗೂ ಕಿರಣ್ ಶ್ರೀನಿವಾಸ್.

ಮದುವೆಯ ವಿಶೇಷ ಸಂಚಿಕೆಯಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಡಲಿದ್ದಾರೆ ಲವ್ಲಿ ಕಪಲ್. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವ ಈ ಜೋಡಿ ಡ್ಯಾನ್ಸ್ ಕೂಡಾ ಮಾಡಲಿದ್ದಾರೆ. ಇನ್ನು ರಾಜ್ ಗುರು ಕುಟುಂಬದ ಕುಡಿ ಪ್ರಣಾಮ್ ಹಾಗೂ ನವ್ಯಾ ಮದುವೆಯಲ್ಲಿ ರೋಚಕ ತಿರುವು ಕೂಡಾ ಇರಲಿದೆ.

ಧಾರಾವಾಹಿ ತಂಡ ಕೂಡ ಬಿಡುವಿಲ್ಲದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಳದಿ ಶಾಸ್ತ್ರದಿಂದ ತೊಡಗಿ ಇತರ ಶಾಸ್ತ್ರಗಳ ಶೂಟಿಂಗ್ ಮಾಡುತ್ತಿದ್ದು ಭರಪೂರ ಮನರಂಜನೆಯೊಂದಿಗೆ ತಿರುವುಗಳು ಇರಲಿವೆ. ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿ ಮದುವೆ ಶೂಟಿಂಗ್ ನಡೆಯುತ್ತಿದ್ದು ಧಾರಾವಾಹಿ ಕಲಾವಿದರು ಹಾಗೂ ಸಿಬ್ಬಂದಿ ವರ್ಗ ಬೀಡುಬಿಟ್ಟಿದೆ.

