• February 17, 2022

ಮತ್ತೆ ಒಂದಾದ ನ್ಯಾಚುರಲ್ ಸ್ಟಾರ್ ಹಾಗೂ ಮಹಾನಟಿ

ಮತ್ತೆ ಒಂದಾದ ನ್ಯಾಚುರಲ್ ಸ್ಟಾರ್ ಹಾಗೂ ಮಹಾನಟಿ

ಶ್ಯಾಮ್ ಸಿಂಗ ರಾಯ್ ಸಿನಿಮಾದ ಸಕ್ಸಸ್ ನಂತ್ರ ನ್ಯಾಚುರಲ್ ಸ್ಟಾರ್ ನಾನಿ ಹಾಗೂ ಮಹಾನಟಿ ಒಟ್ಟಿಗೆ ಪ್ರೇಕ್ಷರ ಮುಂದೆ ಬರಲಿದ್ದಾರೆ….ನಾನಿ ಅಭಿನಯದ ದಸರಾ ಸಿನಿಮಾ ಸೆಟ್ಟೆರಿದ್ದು ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾನಿ ಅವ್ರಿಗೆ ಜೋಡಿ ಆಗಲಿದ್ದಾರೆ‌…

ಹಳ್ಳಿ ಸೊಗಡಿನ ಕಥೆಯನ್ನ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದು ಶ್ರೀಕಾಂತ್ ಒಡೆಲಾ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ… ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

ನಾನಿ ಮತ್ತು ಕೀರ್ತಿ ಸುರೇಶ್ ಈ ಹಿಂದೆ ನೇನು ಲೋಕಲ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು, ಅದು ಬ್ಲಾಕ್ಬಸ್ಟರ್ ಸಕ್ಸಸ್ ಕಂಡಿತ್ತು…ಇದೀಗ ಈ ಯಶಸ್ವಿ ಜೋಡಿ ಎರಡನೇ ಬಾರಿ ಒಟ್ಟಿಗೆ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ….

ಫೆಬ್ರವರಿ 16 ರಂದು, ನಾನಿ ಮತ್ತು ಕೀರ್ತಿ ಸುರೇಶ್ ಅವರ ದಸರಾ ಚಿತ್ರದ ಪೂಜೆ ಸಮಾರಂಭ ನಡೆದಿದ್ದು ಮಾರ್ಚ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಸುಕುಮಾರ್, ಕಿಶೋರ್ ತಿರುಮಲ, ವೇಣು ಉಡುಗುಲ ಮತ್ತು ಶರತ್ ಮಾಂಡವ ಇನ್ನು ಅನೇಕರು ನಾನಿ‌ ಹಾಗೂ ಕೀರ್ತಿಗೆ ವಿಷ್ ಮಾಡಿದ್ರು ಅವರನ್ನು . ನಿರ್ದೇಶಕ ಶ್ರೀಕಾಂತ್ ಅವರ ತಂದೆ ಚಂದ್ರಯ್ಯ ಕ್ಯಾಮರಾ ಸ್ವಿಚ್ ಆನ್ ಮಾಡಿದರೆ, ನಾನಿ ಮತ್ತು ಕೀರ್ತಿ ಸುರೇಶ್ ಮೊದಲ ಕ್ಲಾಪ್ ಮಾಡಿದರು.

Leave a Reply

Your email address will not be published. Required fields are marked *