• February 17, 2022

ಮದುವೆ ಬಗ್ಗೆ ತಮ್ಮ ನಿರ್ಧಾರ ತಿಳಿಸಿದ ರಶ್ಮಿಕಾ ಮಂದಣ್ಣ…

ಮದುವೆ ಬಗ್ಗೆ ತಮ್ಮ ನಿರ್ಧಾರ ತಿಳಿಸಿದ ರಶ್ಮಿಕಾ ಮಂದಣ್ಣ…

ಕರ್ನಾಟಕದ ಕ್ರಶ್ ಎಂದೇ ಜನಪ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿ ಸಕತ್ ಬ್ಯುಸಿ. ಕಳೆದ ವರ್ಷ ರಿಲೀಸ್ ಆದ ಪುಷ್ಪ ಸಿನಿಮಾ ರಶ್ಮಿಕಾ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ನೀಡಿತು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಮೋಡಿ ಮಾಡುತ್ತಿರುವ ಕೊಡಗಿನ ಕುವರಿ ಅಮಿತಾಭ್ ಬಚ್ಚನ್ , ಸಿದ್ದಾರ್ಥ್ ಮಲ್ಲೋತ್ರಾ ಜೊತೆ ನಟಿಸುತ್ತಿದ್ದಾರೆ. ಇನ್ನು ನಟನೆಯ ಹೊರತಾಗಿ ರಶ್ಮಿಕಾ ಅವರು ಖಾಸಗಿ ಬದುಕಿನ ಬಗ್ಗೆಯೂ ಆಗಾಗ ಸುದ್ದಿ ಆಗುತ್ತಿರುತ್ತಾರೆ.

ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ರಶ್ಮಿಕಾ ಮಂದಣ್ಣ ಮುಕ್ತವಾಗಿ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಬ್ರೇಕಪ್ ನ ಬಳಿಕ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ಥಳಕು ಹಾಕಿಕೊಂಡಿತ್ತು. ಇದೀಗ ಮದುವೆಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ “ಪ್ರೀತಿ ಎಂದರೆ ನನ್ನ ಪ್ರಕಾರ ಒಬ್ಬರಿಗೊಬ್ಬರು ಪರಸ್ಪರ ಗೌರವ ಕೊಡುವುದು. ಒಬ್ಬರ ಮೇಲೆ ಸುರಕ್ಷಿತ ಭಾವ ಮೂಡುವುದೇ ಪ್ರೀತಿ. ಮಾತ್ರವಲ್ಲ ಪ್ರೀತಿಯೆನ್ನುವುದು ಭಾವನೆಗಳಿಗೆ ಸಂಬಂಧ ಪಟ್ಟದ್ದು ಹೌದು. ಅದೇ ಕಾರಣದಿಂದ ಆ ಪ್ರೀತಿಯನ್ನು ವಿವರಿಸಲು ಅಸಾಧ್ಯ” ಎನ್ನುತ್ತಾರೆ.

“ಇನ್ನು ಕೂಡಾ ನಾನು ಮದುವೆಯ ಬಗ್ಗೆ ಯಾವುದೇ ರೀತಿಯ ಯೋಚನೆ ಮಾಡಲಿಲ್ಲ. ಯಾಕೆಂದರೆ ಮದುವೆಯಾಗಲು ನಾನು ಇನ್ನು ತುಂಬಾ ಚಿಕ್ಕವಳು‌. ಸೋ ಮದುವೆಯ ಬಗ್ಗೆ ಇನ್ನು ಸ್ಪಷ್ಟವಾದ ನಿರ್ಧಾರ ಮಾಡಲಿಲ್ಲ” ಎಂದು ಹೇಳುತ್ತಾರೆ ಕರ್ನಾಟಕದ ಕ್ರಶ್.

Leave a Reply

Your email address will not be published. Required fields are marked *