- January 29, 2022
ಡಿವೋರ್ಸ್ ಪೋಸ್ಟ್ ಡಿಲಿಟ್ ಮಾಡಿದ ಸಮಂತಾ-ಸಿಗಲಿದ್ಯಾ ಗುಡ್ ನ್ಯೂಸ್

ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.. ಈಗಾಗಲೇ ಈ ಘಟನೆ ನಡೆದು 4ತಿಂಗಳಾಗುತ್ತ ಬಂದರೂ ಇಂದಿಗೂ ಈ ವಿಚಾರ ಬಿಸಿಬಿಸಿಯಾಗಿಯೇ ಚರ್ಚೆ ಆಗುತ್ತಲೇ ಇದೆ ..

ಕೆಲವರು ಸಮಂತ ಪರವಾಗಿ ಮಾತನಾಡಿದ್ರೆ..ಇನ್ಮು ಕೆಲವ್ರು ನಾಗಚೈತನ್ಯ ಪರವಾಗಿ ಮಾತನಾಡುತ್ತಿದ್ದಾರೆ ಒಟ್ಟಾರೆ ಇಂದಿಗೂ ಕೂಡ ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಟಾಪಿಕ್ ಹಾಗೆಯೇ ಉಳಿದಿದೆ …ಇನ್ನು ಇತ್ತೀಚೆಗಷ್ಟೇ ನಾಗಾರ್ಜುನ ಅವರು ಮ್ಯಾಗ್ಸಿನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ವಿಚ್ಛೇದನ ಕೇಳಿದ್ದು ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು…

ಆದರೆ ಅದೇ ವಿಚಾರವಾಗಿ ಟ್ವೀಟ್ ಮಾಡಿರೋ ನಾಗಾರ್ಜುನ್ ನಾನು ನನ್ನ ಮಗನ ವಿಚ್ಛೇದನದ ವಿಚಾರವಾಗಿ ಯಾವುದೇ ಸಂದರ್ಶನದಲ್ಲಿ ಮಾತನಾಡಿಲ ಎಂದು ಸ್ಪಷ್ಟಪಡಿಸಿದ್ದರು…. ಇದರ ಬೆನ್ನಲ್ಲೇ ನಟಿ ಸಮಂತಾ ತಾವು ವಿಚ್ಛೇದನ ಪಡೆದ ದಿನ ಶೇರ್ ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ ..

ಸದ್ಯ ಡಿವೋರ್ಸ್ ವಿಚಾರದ ಪೋಸ್ಟ್ ಡಿಲೀಟ್ ಮಾಡಿ ರುವುದನ್ನು ಗಮನಿಸಿರುವ ಫ್ಯಾನ್ಸ್ ಸಮಂತಾ ಕಡೆಯಿಂದ ಗುಡ್ ನ್ಯೂಸ್ ಸಿಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ…ಎಂದರೆ ಮತ್ತೆ ಸಮಂತಾ ಹಾಗೂ ನಾಗಚೈತನ್ಯ ಮುಂದಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು…
