- December 21, 2021
ಮೇಘನಾ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ !

ಕ್ರಿಸ್ಮಸ್ ಹಬ್ಬ ಹತ್ತಿರವಾಗ್ತಿದೆ…ಸಿನಿಮಾರಂಗದಲ್ಲಿಯೂ ಸಾಕಷ್ಟು ಜನರು ಕ್ರಿಸ್ಮಸ್ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡ್ತಾರೆ…ಅದರಲ್ಲಿ ಮೇಘನಾ ರಾಜ್ ಕೂಡ ಒಬ್ಬರು…
ಪ್ರತಿ ವರ್ಷ ಕ್ರಿಸ್ಮಸ್ ಹಬ್ನವನ್ನ ಸಂಭ್ರಮದಿಂದ ಆಚರಣೆ ಮಾಡೋ ಮೇಘನಾ ರಾಜ್ ಈ ವರ್ಷವೂ ಕೂಡ ಖುಷಿ ಖುಷಿಯಿಂದ ಸೆಲಬ್ರೇಟ್ ಮಾಡ್ತಿದ್ದಾರೆ…


ಈಗಾಗಲೇ ಮೇಘನಾ ಮನೆಯಲ್ಲಿ ಹಬ್ಬದ ತಯಾರಿ ನಡೆದಿದ್ದು ಈ ಭಾರಿ ರಾಯನ್ ಜೊತೆಯಲ್ಲಿ ಕ್ರಿಸ್ಮಸ್ ಆಚರಣೆ ಮಾಡಲಿದ್ದಾರೆ…ಕ್ರಿಸ್ಮಸ್ ಹತ್ತಿರವಾಗುತ್ತಿದೆ ಎಂದು ಮಗನ ಜೊತೆಯಲ್ಲಿ ಕ್ರಿಸ್ಮಸ್ ಲೈಟ್ ಗಳೊಂದಿಗೆ ಮೇಘನಾ ಫೋಟೋ ಶೇರ್ ಮಾಡಿದ್ದಾರೆ…ಅದರ ಜೊತೆಯಲ್ಲಿ ಪ್ರೀತಿ. ಜೀವನ ಹಾಗೂ ಕ್ರಿಸ್ಮಸ್ ನ ಮಿರಾಕಲ್ ಮಂತ್ ಎಂದು ಕ್ಯಾಪ್ಷನ್ ನೀಡಿದ್ದಾರೆ …

