• December 10, 2021

ಬೆಂಗಳೂರಿನಲ್ಲಿ ಥ್ರಿಬ್ಬಲ್ ಆರ್ ತಂಡ -ಪ್ರೆಸ್ ಮೀಟ್ ಹೈಲೆಟ್ಸ್ ಇಲ್ಲಿದೆ

ಬೆಂಗಳೂರಿನಲ್ಲಿ ಥ್ರಿಬ್ಬಲ್ ಆರ್ ತಂಡ -ಪ್ರೆಸ್ ಮೀಟ್ ಹೈಲೆಟ್ಸ್ ಇಲ್ಲಿದೆ

ಟಾಲಿವುಡ್ ಹಾಗೂ ಬಾಲಿವುಡ್ ಸೂಪರ್*ಗಳು ಅಭಿನಯ ಮಾಡಿ ರುವ ಆರ್ ಆರ್ ಆರ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದುಕೊಂಡಿದೆ ಸಿನಿಮಾ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದ್ದು ಚಿತ್ರತಂಡ ಸಿನಿಮಾ ಪ್ರಚಾರಕ್ಕಾಗಿ ಇಂದು ಬೆಂಗಳೂರಿಗೆ ಬಂದಿತ್ತು …

ನಟ ರಾಮ್ ಚರಣ್ , ಜೂನಿಯರ್ ಎನ್ ಟಿ ಆರ್ ಆಲಿಯಾ ಭಟ್ ಹಾಗೂ ರಾಜಮೌಳಿ ಮಾಧ್ಯಮಗಳ ಕೇಳಿದಂತಹ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಶೇಷ ಎಂದರೆ ರಾಜ್ ಚರಣ್ ಹಾಗೂ ಎನ್ ಟಿ ಆರ್ ಕನ್ನಡದ ಟ್ರೇಲರ್ ಗೆ ತಾವೇ ಡಬ್ ಮಾಡಿದ್ದಾರೆ…

ಸಿನಿಮಾಗೂ ತಾವೇ ಡಬ್ ಮಾಡಲು ನಿರ್ಧರಿಸಿದ್ದು ಈಗಾಗಲೇ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ತಿದ್ದಾರೆ…ಸುದ್ದಿಗೋಷ್ಟಿಯುದ್ದಕ್ಕೂ ಬಹುತೇಕ‌ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ರು ರಾಮ್ ಚರಣ್, ಎನ್ ಟಿ ಆರ್ ಹಾಗೂ ರಾಜಮೌಳಿ…

ಇನ್ನು ಸುದ್ದಿಗೋಷ್ಠಿ ಆರಂಭದಲ್ಲಿಯೇ ಪುನೀತ್ ಅವರನ್ನ‌ ನೆನದು ಚಿತ್ರತಂಡ ಒಂದು‌ ನಿಮಿಷ ಮೌನಾಚರಣೆ ಮಾಡಿದ್ರು…ಇನ್ನು ಬಾಹುಬಲಿ ‌ಸಿನಿಮಾ‌ ಮಾಡಿದಾಗ ಕನ್ನಡದಲ್ಲಿ ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಸಾಕಷ್ಟು ಅಭಿಮಾನಿಗಳು ರಾಜಮೌಳಿ ಅವ್ರನ್ನ ಪ್ರಶ್ನೆ ಮಾಡಿದ್ದರಂತೆ ಹಾಗಾಗಿ ಆರ್ ಆರ್ ಆರ್ ಸಿನಿಮಾವನ್ನ ಕನ್ನಡದಲ್ಲಿಯೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ…

Leave a Reply

Your email address will not be published. Required fields are marked *