• December 10, 2021

ಆರ್ ಆರ್ ಆರ್ ಚಿತ್ರದಲ್ಲಿ ಸುದೀಪ್ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಾಜಮೌಳಿ ಉತ್ತರ ….

ಆರ್ ಆರ್ ಆರ್ ಚಿತ್ರದಲ್ಲಿ ಸುದೀಪ್ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಾಜಮೌಳಿ ಉತ್ತರ ….

ಭಾರತೀಯ‌ ಸಿನಿಮಾರಂಗದ ದಿ ಬೆಸ್ಟ್ ನಿರ್ದೇಶಕರ ಸಾಲಿನಲ್ಲಿ ನಿಲ್ಲೋ ನಿರ್ದೇಶಕ ರಾಜಮೌಳಿ…ಸೋಲಿಲ್ಲದ ಸರದಾರನಾಗಿ ಮಿಂಚುತ್ತಿರುವ ರಾಜಮೌಳಿ ನಿರ್ದೇಶನದ ಪ್ರತಿ ಸಿನಿಮಾನೂ ಭಾರತಿಯ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತಾ ಬರುತ್ತಿದೆ…

ಇಂತಹ‌ ನಿರ್ದೇಶಕ‌ನ ಸಿನಿಮಾದಲ್ಲಿ ಕಿಚ್ಚನಿಗೆ ಪ್ರತಿ ಬಾರಿಯೂ ವಿಶೇಷ ಪಾತ್ರ ಕಟ್ಟಿಟ್ಟ ಬುತ್ತಿ…ಈ‌ಹಿಂದೆ ರಾಜಮೌಳಿ ನಿರ್ದೇಶನದ ಈಗ. ಬಾಹುಬಲಿ ಸಿನಿಮಾದಲ್ಲಿ ಕಿಚ್ವ ಅಭಿನಯ ಮಾಡಿದ್ರು..ರಾಜಮೌಳಿಯ ಉತ್ತಮ ಸ್ನೇಹಿತರಾಗಿರೋ ಕಿಚ್ಚನಿಗಾಗಿ ವಿಶೇಷ ಪಾತ್ರವನ್ನ ಜಕ್ಕಣ್ಣ ಫಿಕ್ಸ್ ಮಾಡ್ತಿದ್ರು …ಆದ್ರೆ ಆರ್ ಆರ್ ಆರ್ ನಲ್ಲಿ ಕಿಚ್ವನ ಅಭಿನಯ ಯಾಕಿಲ್ಲ ಅನ್ನೋ ಪ್ರಶ್ನೆಗೆ ರಾಜಮೌಳಿ ಉತ್ತರಿಸಿದ್ದಾರೆ…

ನಾನು ಪಾತ್ರ ಯಾರನ್ನ ಡಿಮ್ಯಾಂಡ್ ಮಾಡುತ್ತೋ ಅವರನ್ನ ಸಿನಿಮಾದಲ್ಲಿ ಆಯ್ಕೆ ಮಾಡಿಕೊಳ್ತಿನಿ..ಕಿಚ್ಚ ನನಗೆ ತುಂಬಾ ಆತ್ಮೀಯರು..ಬಾಹುಬಲಿ ಚಿತ್ರದಲ್ಲಿ ಆ ಪಾತ್ರಕ್ಕೆ ಅವರೇ ಬೇಕಾಗಿತ್ತು ಹಾಗಾಗಿ ಆಯ್ಕೆ ಮಾಡಿಕೊಂಡ್ವಿ ಎಂದಿದ್ದಾರೆ…ಸುದೀಪ್ ರೊಂದಿಗೆ ಎಂದಿಗೂ ವ್ಯಬಹಾರ ನಡೆಯೋದಿಲ್ಲ ಸ್ನೇಹ ಮಾತ್ರ ಅನ್ನೋದನ್ನು ಹೇಳಿದ್ದಾರೆ ರಾಜಮೌಳಿ ಈ ಮೂಲಕ ಕಿಚ್ಚ ಎಂಟ್ರಿ ಯಾಕಿಲ್ಲ ಅನ್ನೋದಕ್ಕೆ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ..

Leave a Reply

Your email address will not be published. Required fields are marked *