- December 10, 2021
ಹೊಸ ಅವತಾರದಲ್ಲಿ ಬರ್ತಿದೆ ಕವಿರತ್ನ ಕಾಳಿದಾಸನ ಶಾಕುಂತಲಮ್

ಮಹಾಕಾವ್ಯಗಳನ್ನಾಧರಿಸಿ ಹಲವು ಸಿನಿಮಾಗಳು ಬಂದಿವೆ. ಅದರಲ್ಲೂ ಮಹಾಕವಿ ಕಾಳಿದಾಸರಿಂದ ರಚಿತವಾದ ಶಾಕುಂತಲಂ ಕಾವ್ಯದಿಂದ ಸ್ಪೂರ್ತಿ ಪಡೆದು ಬಹಳಷ್ಟು ಸಿನಿಮಾಗಳು ಬಂದಿವೆ. ಅದರಲ್ಲೂ ಕನ್ನಡಿಗರಿಗೆ ನೆನಪಾಗುವುದು ಕವಿರತ್ನ ಕಾಳಿದಾಸ ಸಿನಿಮಾ.

ಮೂಲಃ ಕಾಳಿದಾಸ ಎಂದ ತಕ್ಷಣ ನೆನಪಾಗುವುದು ಡಾ.ರಾಜ್ ಕುಮಾರ್. ಅವರ ಅಭಿನಯ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಅಮೋಘ. ಅದನ್ನು ಯಾರು ತಾನೇ ಮರೆಯಲು ಸಾಧ್ಯ.

ಇದೀಗ ಇದೇ ಕಥೆ ಸಂಸ್ಕೃತದಲ್ಲಿ ನಿರ್ಮಾಣವಾಗುತ್ತಿದೆ. ಸಂಸ್ಕೃತದಲ್ಲಿರುವ ಹಲವು ಕಾವ್ಯ ಪುರಾಣಗಳು ಬಹಳಷ್ಟು ಸಿನಿಮಾಗಳಿಗೆ ಸ್ಪೂರ್ತಿಯಾಗಿ ಸಿನಿಮಾಗಳಾಗಿವೆ.
ಶಾಕುಂತಲಮ್ ಚಿತ್ರದಲ್ಲಿ ಶೇ. 90 ರಷ್ಟು ಡೈಲಾಗ್ ಗಳು ಸಂಸ್ಕೃತದಲ್ಲಿವೆ. ಉಳಿದ ಶೇ. 5 ರಷ್ಟು ಡೈಲಾಗ್ ಗಳು ಪ್ರಾಕೃತ ಭಾಷೆಯಲ್ಲಿದೆ.

ಪಾಯಲ್ ವಿಜಯ್ ಶೆಟ್ಟಿ ಹಾಗೂ ಶುಭಂ ಜೈಬೀರ್ ಸಹರಾವತ್ ತಾರಾಗಣವಿದೆ. ಬಾದಾಮಿ. ಐಹೊಳೆ, ಪಟ್ಟದಕಲ್ಲು ಹೀಗೆ ಹೊಯ್ಸಳ ವಾಸ್ತುಶಿಲ್ಪವಿರುವ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಯಕ್ಷಗಾನ, ಭರತನಾಟ್ಯಂ, ಮೋಹಿಯಾಟ್ಟಂ ಸೇರಿದಂತೆ ಹಲವು ಕರಾವಳಿ ನೃತ್ಯಗಳು ಈ ಸಿನಿಮಾದಲ್ಲಿವೆ.
ಇನ್ನೊಂದು ವಿಶೇಷವೆಂದರೆ ಸಿನಿಮಾದಲ್ಲಿ ಪಾತ್ರಗಳಿಗೆ ಖಾದಿ ಬಟ್ಟೆಯನ್ನು ಬಳಸಿದ್ದಾರೆ. ಏಕೆಂದರೆ ಭಾರತಕ್ಕೆ ಸ್ವತಂತ್ರ್ಯ ಬಂದು 75 ವರುಷಗಳಾಗಿರುವ ಪ್ರಯುಕ್ತ.

ಹೀಗೆ ಹಲವು ವಿಶೇಷತೆಗಳೊಂದಿಗೆ ಬರುತ್ತಿದೆ “ಶಾಕುಂತಲಮ್” ಸಿನಿಮಾ. ದೇವನಾಗರಿ ಲಿಪಿ ಸಂಸ್ಕೃತದಲ್ಲಿ ಈ ಸಿನಿಮಾ ಬರಲಿದೆ.