- February 27, 2022
ಇದು ಸವಾಲಿನ ಪಾತ್ರ ಎಂದ ಡಿಂಪಲ್ ಕ್ವೀನ್… ಯಾವ ಪಾತ್ರ ಗೊತ್ತಾ?

ಪ್ರೇಮ್ ನಿರ್ದೇಶನದ ಚಿತ್ರ ಎಲ್ಲೆಡೆ ಕ್ರೇಜ್ ಮೂಡಿಸುತ್ತಿದೆ. ತನ್ನ ಸಂಗೀತದಿಂದ ಗಮನ ಸೆಳೆಯುತ್ತಿರುವ ಚಿತ್ರದಲ್ಲಿ ಹೊಸ ನಟರು ನಟಿಸುತ್ತಿದ್ದಾರೆ. ಏಕ್ ಲವ್ ಯಾ ಸಿನಿಮಾ ಅದ್ಭುತವಾಗಿ ಮೂಡಿಬಂದಿರುವ ಸಿನಿಮಾ. ರಾಣಾ ಹಾಗೂ ರೀಷ್ಮಾ ನಾಣಯ್ಯ ಈ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಹಿಂದಿನ ಚಿತ್ರಗಳಲ್ಲಿ ಮಾಡಿರದ ಪಾತ್ರವನ್ನು ಮಾಡಲಿದ್ದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.


ಈ ಕ್ರೆಡಿಟ್ ಅನ್ನು ಸಿನಿಮಾ ತಂಡಕ್ಕೆ ನೀಡಿರುವ ರಚಿತಾ “ಪ್ರೇಮ್ ಸರ್ ತಮ್ಮ ಕೆಲಸದಲ್ಲಿ ತುಂಬಾ ತಲ್ಲೀನರಾಗಿರುತ್ತಾರೆ. ಅವರ ಪ್ಯಾಶನ್ ಏಕ್ ಲವ್ ಯಾ ದ ಎಲ್ಲಾ ಫ್ರೇಮ್ ಗಳಲ್ಲಿಯೂ ಕಾಣುತ್ತದೆ. ಎಕ್ಸ್ ಪ್ರೆಶನ್ ನಿಂದ ಹಿಡಿದು ಸಣ್ಣ ಮಾಹಿತಿಯವರೆಗೂ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತದೆ. ಇಂತಹ ಸುಂದರ ಪಾತ್ರ ನೀಡಿರುವುದಕ್ಕೆ ರಕ್ಷಿತಾ ಮೇಡಂ ಹಾಗೂ ಪ್ರೇಮ್ ಸರ್ ಅವರಿಗೆ ಕೃತಜ್ಞತೆ ಹೇಳುತ್ತೇನೆ” ಎನ್ನುತ್ತಾರೆ.

“ನಾನು ಇಂತಹ ಪಾತ್ರ ಈ ಮೊದಲು ಮಾಡಿಲ್ಲ. ಈ ಪಾತ್ರಕ್ಕೆ ಜೀವ ತುಂಬಿದ್ದು ನನಗೆ ತುಂಬಾ ಖುಷಿ ತಂದಿದೆ. ಮಾತ್ರವಲ್ಲ ಈ ಪಾತ್ರವನ್ನು ಜನರು ಕೂಡಾ ಸ್ವೀಕರಿಸುತ್ತಾರೆ ಎಂದು ನಾನು ನಂಬಿದ್ದೇನೆ. ಇದು ಸವಾಲಿನ ಪಾತ್ರವೂ ಹೌದು”ಎಂದಿದ್ದಾರೆ ಡಿಂಪಲ್ ಕ್ವೀನ್.

ಈಗಾಗಲೇ ಚಿತ್ರದ ಎರಡು ಹಾಡುಗಳನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ ಎಂದು ಹೇಳಿರುವ ರಚಿತಾ”ಎಣ್ಣೆಗೂ ಹೆಣ್ಣಿಗೂ ಹಾಗೂ ಮೀಟ್ ಮಾಡೋಣ ಹಾಡುಗಳು ರೂಪುಗೊಂಡ ರೀತಿಗೆ ನನಗೆ ರೋಮಾಂಚನವಾಗಿದೆ. ನನ್ನ ನಟನೆ ಹಾಗೂ ಅಭಿವ್ಯಕ್ತಿ ಹೇಗಿರಬೇಕೆಂದರೆ ಪ್ರೇಮ್ ಸರ್ ಅವರೇ ಗಾಂಧಿ ಕ್ಲಾಸಿನಲ್ಲಿ ಕುಳಿತು ನಾಣ್ಯಗಳನ್ನು ಎಸೆಯಬೇಕು ಎಂದು ಹೇಳಿದ್ದರು. ಲಿಪ್ ಲಾಕ್ ಅಥವಾ ಸಿಗರೇಟ್ ದೃಶ್ಯ ಚೆನ್ನಾಗಿ ಮೂಡಿ ಬಂದಿದೆ ಎಂದು ನಾನು ಭರವಸೆ ನೀಡುತ್ತೇನೆ”ಎಂದಿದ್ದಾರೆ.


ಇದರ ಜೊತೆಗೆ” ನನ್ನ ಹಾಡುಗಳು ಲಕ್ಷಗಟ್ಟಲೆ ರೀಲ್ಸ್ ಆಗಿವೆ. ತುಂಬಾ ಕಷ್ಟಪಟ್ಟು ರೀಲ್ಸ್ ಮಾಡಿದ್ದಾರೆ. ನನ್ನ ಮೇಲೆ ಮಾತ್ರವಲ್ಲದೆ ನನ್ನ ತಂಡದ ಮೇಲೆ ಪ್ರೀತಿ ತೋರಿಸಿದ್ದಕ್ಕೆ ಕೃತಜ್ಞತೆ ಹೇಳುತ್ತೇನೆ”ಎಂದಿದ್ದಾರೆ.