• February 28, 2022

ಲವ್ ಮೊಕ್ಟೈಲ್ 2 ಸಕ್ಸಸ್ ಸ್ಟೋರಿಲೊಂದು ಟ್ವಿಸ್ಟ್

ಲವ್ ಮೊಕ್ಟೈಲ್ 2 ಸಕ್ಸಸ್ ಸ್ಟೋರಿಲೊಂದು ಟ್ವಿಸ್ಟ್

ಲವ್ ಮೊಕ್ಟೈಲ್ 2020ರ ಕೋರೋನ ಕಾಲದಲ್ಲಿ ಚಿಂತೆಗಳ ಜೊತೆಗೆ ಮನದಲ್ಲಿ ಉಳಿದು ಜನರಿಗೆ ಒಂದಷ್ಟು ನೆಮ್ಮದಿ ಕೊಟ್ಟಿದ್ದಂತ ಚಿತ್ರ. ಎಲ್ಲ ಬಗೆಯ ಪ್ರೇಕ್ಷಕರನ್ನು ಎಲ್ಲ ಬಗೆಯ ಕಲಾರಸಿಕರನ್ನು ಒಮ್ಮೆಗೆ ತನ್ನತ್ತ ಸೆಳೆದು ಕಣ್ಣು ತುಂಬಿಸಿ ಕಳಿಸಿತ್ತು. ಈ ಚಿತ್ರದ ಯಶಸ್ಸಿನ ಕಥೆ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ಇದರ ಹಿಂದೆ ಡಾರ್ಲಿಂಗ್ ಕೃಷ್ಣ-ಮಿಲನ ಕೃಷ್ಣ ಜೋಡಿಯ ಪರಿಶ್ರಮ ಕೂಡ ಎಲ್ಲರಿಗೂ ಪರಿಚಿತ. ಅದೇ ಹುಮ್ಮಸ್ಸಿನಲ್ಲಿ ಈ ಜೋಡಿ ಇದೀಗ ಅದರ ಮುಂದಿನ ಭಾಗವನ್ನು ಬಿಡುಗಡೆಗೊಳಿಸಿದ್ದು ಚಿತ್ರಮಂದಿರಗಳಲ್ಲಿ ‘ಲವ್ ಮೊಕ್ಟೇಲ್ 2’ ಎಲ್ಲರ ಮನಸ್ಸನ್ನು ಕದಿಯುತ್ತಿದೆ. ಚಿತ್ರದ ಯಶಸ್ಸಿನ ಬಗ್ಗೆ ಜೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೇ ನಡೆದ ಒಂದು ಸಂದರ್ಶನದಲ್ಲಿ ನಿರ್ದೇಶಕ-ನಿರ್ಮಾಪಕ ಮಾತ್ರವಲ್ಲದೆ ಪತಿ-ಪತ್ನಿ ಜೋಡಿಯಾಗಿರೋ ಕೃಷ್ಣ ಹಾಗೂ ಮಿಲನ ಕೃಷ್ಣ ಮಾತನಾಡಿದ್ದು ಪ್ರೇಕ್ಷಕರು ತಮ್ಮ ಚಿತ್ರಕ್ಕೆ ನೀಡುತ್ತಿರೋ ಬೆಂಬಲಕ್ಕೆ ಮನತುಂಬಿ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಭರದಿಂದ ಅಬ್ಬರಿಸುತ್ತಿರೋ ಚಿತ್ರವನ್ನ ಪ್ರೇಕ್ಷಕರು ಮನದಾಳದಿಂದ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ಮಿಲನ ಕೃಷ್ಣ “ಈ ಬಾರಿ ನಮ್ಮ ಚಿತ್ರವನ್ನ ಯಾವುದೇ ಒಟಿಟಿ ತಂಡಕ್ಕೆ ಇಲ್ಲಿವರೆಗೂ ನೀಡಿಲ್ಲ. ಆದಷ್ಟು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಿ ಚಿತ್ರವನ್ನ ಆನಂದಿಸಬೇಕೆಂಬುದು ನಮ್ಮ ಉದ್ದೇಶ, ಹಿಂದಿನ ಬಾರಿಯಂತೆ ಸಿನಿಮಾ ನ ಥೀಯೇಟರ್ ನಲ್ಲಿ ಮಿಸ್ ಮಾಡಿಕೊಂಡೆ ಎಂದು ಯಾರು ಬೇಜಾರಾಗಬಾರದು. ಇಲ್ಲಿವರೆಗೂ ಸಿನಿಮಾವನ್ನ ನೋಡದೆ ಇರುವವರು ಚಿತ್ರಮಂದಿರಕ್ಕೇ ಬಂದು, ನೋಡಿ ಆನಂದಿಸಿ” ಎಂದಿದ್ದಾರೆ.

ಹೌದು, ಲವ್ ಮೊಕ್ಟೇಲ್ ಚಿತ್ರ ಭಾರಿ ಯಶಸ್ಸು ಕಂಡದ್ದು ನಿಜವಾಗಿದ್ದರು ಸಹ ಆ ಯಶಸ್ಸು ಸಿಕ್ಕದ್ದು ಚಿತ್ರ ಚಿತ್ರಮಂದಿರದಿಂದ ಹೊರಬಿದ್ದ ಮೇಲೆ. ಕೋರೋನ ಅಲೆಗಳಿಂದ ಬೇಸತ್ತಿದ್ದ ಜನರ ಮುಂದೆ ಅಮೆಜಾನ್ ಪ್ರೈಮ್ ವಿಡಿಯೋ ಈ ಸಿನಿಮಾವನ್ನ ಇಟ್ಟಿತ್ತು. ಮನೆಯಲ್ಲೇ ಕೂತು ನೋಡಿದ ಪ್ರೇಕ್ಷಕೆರೆಲ್ಲರೂ ಚಿತ್ರದೊಳಗಿದ್ದ ಎಲ್ಲ ಭಾವನೆಗಳನ್ನ ಮನತುಂಬಿಸಿಕೊಂಡಿದ್ದರು. ಚಿತ್ರಮಂದಿರದಲ್ಲೇ ನೋಡಲಿಲ್ಲವಲ್ಲ ಎಂದು ಪರಿತಪಿಸಿದ್ದರು ಕೂಡ. ಹಾಗಾಗಿ ಈ ಬಾರಿ ಒಟಿಟಿಗೆ ಸದ್ಯಕ್ಕೆ ಸಿನಿಮಾ ಕೊಡದೆ ಇರೋ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ. ಚಿತ್ರಕ್ಕೆ ಇನ್ನಷ್ಟು ಯಶಸ್ಸು ಸಿಕ್ಕಲ್ಲಿ ಎಂಬುದೇ ನಮ್ಮ ಹಾರೈಕೆ.

Leave a Reply

Your email address will not be published. Required fields are marked *