- November 30, 2021
ಮಾಫಿಯಾ ಸಿನಿಮಾಗಾಗಿ ಬದಲಾಯ್ತು ಪ್ರಜ್ವಲ್ ಲುಕ್


ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಅಭಿನಯದ ಮಾಫಿಯಾ ಸಿನಿಮಾ ಸೆಟ್ಟೆರಲು ಸಿದ್ದವಾಗಿದೆ…ಮಾಫಿಯಾ” ಚಿತ್ರಕ್ಕಾಗಿ ಎರಡು ವರ್ಷಗಳ ನಂತರ ಪ್ರಜ್ವಲ್ ದೇವರಾಜ್ ಕೂದಲಿಗೆ ಕತ್ತರಿ ಬಿದ್ದಿದೆ…ವೀರಂ ಸಿನಿಮಾಗಾಗಿ ಪ್ರಜ್ವಲ್ ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರಲಿಲ್ಲ….

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ ಇದಾಗಿದ್ದು ಮಾಫಿಯಾ ಚಿತ್ರಕ್ಕಾಗಿ ಎರಡು ವರ್ಷಗಳಿಂದ ದಟ್ಟವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಿದ್ದಾರೆ…ಇನ್ನು ಸ್ಪೆಷಲ್ ಅಂದ್ರೆ ಆ ಕೂದಲನ್ನು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಮ್ಮಿ” ಮತ್ತು “ದೇವಕಿ”ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಲೋಹಿತ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ…ಮಾಫಿಯಾ ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದೆ. ಚಿತ್ರೀಕರಣ ಡಿಸೆಂಬರ್ 6ರಿಂದ ಆರಂಭವಾಗಲಿದೆ….ಪ್ರಜ್ವಲ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದು ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ
