- January 22, 2022
ಹುಟ್ಟುಹಬ್ಬದಂದು ಯದುವೀರ ಆದರು ನಿಖಿಲ್ ಕುಮಾರಸ್ವಾಮಿ

ಸ್ಯಾಂಡಲ್ ವುಡ್ ನ ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ನಿಕಿ ನೇ ವರ್ಷವು ಕೂಡ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡಿದ್ದು ಮನೆಯಲ್ಲಿ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಬರ್ತಡೆ ಸೆಲೆಬ್ರೇಟ್ ಮಾಡಿ ಕೊಂಡಿದ್ದಾರೆ…ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇರುವ ನಿಖಿಲ್ಗೆ ಅಭಿಮಾನಿಗಳು, ರಾಜಕೀಯ ನಾಯಕರು ಹಾಗೂ ಚಿತ್ರರಂಗದವರು ಶುಭಾಶಯ ತಿಳಿಸುತ್ತಿದ್ದಾರೆ. ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ನಿಖಿಲ್ ಅಭಿನಯದ ಯದುವೀರ ಚಿತ್ರಕ್ಕೆ ಮಂಜು ಅಥರ್ವ ನಿರ್ದೇಶನ ಮಾಡುತ್ತಿದ್ದು ಕೆವಿನ್ ಪ್ರೊಡಕ್ಷನ್ ನಲ್ಲಿ ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ ಚಿತ್ರೀಕರಣ ನಡೆಯುತ್ತಿದ್ದು ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಸಿನಿಮಾತಂಡ ಬ್ಯೂಸಿ ಆಗಲಿದ್ದಾರೆ…ಕಳೆದ ಏಳು ವರ್ಷಗಳಿಂದ ಮಂಜು ಯಶ್ ನಟನೆಯ ‘ಮಾಸ್ಟರ್ ಪೀಸ್’, ಶಿವರಾಜ್ಕುಮಾರ್ ಅಭಿನಯದ ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.. ನಿಖಿಲ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಟೈಟಲ್ ಇಂದು ಘೋಷಣೆ ಆಗಿದೆ. ಜತೆಗೆ ಫಸ್ಟ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಮೂಲಕ ನಿಖಿಲ್ ಬರ್ತ್ಡೇಗೆ ಅಭಿಮಾನಿಗಳಿಗೆ ಚಿತ್ರತಂಡದಿಂದ ಗಿಫ್ಟ್ ಸಿಕ್ಕಿದೆ.
