- January 22, 2022
ಪ್ರಿಯಾಂಕ ಚೋಪ್ರ ಮನೆಗೆ ಬಂತು ಮುದ್ದಾದ ಹೆಣ್ಣು ಮಗು.. ಆದರೆ ಪಿಗ್ಗಿ ತಾಯಿಯಲ್ಲ

ನಟಿ ಪ್ರಿಯಾಂಕ ಚೋಪ್ರ ಕೆಲವು ವರ್ಷಗಳ ಹಿಂದೆ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ನಂತರ ನಿಕ್ ಜೊತೆ ಸುಂದರ ದಾಂಪತ್ಯ ಜೀವನ ಕಟ್ಟಿಕೊಂಡಿರುವ ಪ್ರಿಯಾಂಕ ಇತ್ತೀಚೆಗಷ್ಟೆ ನಾವು ಮಗುವನ್ನ ಪಡೆಯುವುದೇ ನಮ್ಮ ಜೀವನದ ಅತಿ ದೊಡ್ಡ ಕನಸು ಎಂದು ಹೇಳಿಕೆ ಕೊಟ್ಟಿದ್ದರು… ಅದಾದ ಕೆಲವೇ ದಿನಗಳಲ್ಲಿ ಈಗಾಗಲೇ ಪ್ರಿಯಾಂಕ ಮನೆಗೆ ಮುದ್ದಾದ ಹೆಣ್ಣುಮಗು ಕಾಲಿಟ್ಟಿದೆ…

ಹೌದು ನಟಿ ಪ್ರಿಯಾಂಕ ಚೋಪ್ರಾ ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ನಾನು ಹಾಗೂ ನಿಕ್ ಇಬ್ಬರೂ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಂಡಿದ್ದೆವೆ.. ಮುದ್ದಾದ ಹೆಣ್ಣು ಮಗು ನಮ್ಮ ಮನೆಗೆ ಕಾಲಿಟ್ಟಿದೆ.. ನಮ್ಮ ಹಾಗೂ ಮಗುವಿನ ಪ್ರೈವೆಸಿಗಾಗಿ ಯಾವುದೇ ರೀತಿಯ ಮಗುವಿನ ಫೋಟೋ ಹಾಗೂ ವಿಚಾರವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ …

ಪ್ರಿಯಾಂಕ ಮನೆಗೆ ಹೆಣ್ಣು ಮಗು ಬಂದಿರೋದು 1ರೀತಿಯಲ್ಲಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ ಮತ್ತೊಂದು ಕಡೆಯಲ್ಲಿ ಅಭಿಮಾನಿಗಳ ಪ್ರಿಯಾಂಕ ಯಾವ ಕಾರಣಕ್ಕೆ ಬಾಡಿಗೆ ತಾಯಿಯಿಂದ ಮಗು ಪಡೆದರು….ತಾವೇ ಗರ್ಭಿಣಿಯಾಗಿ ಮಗುವನ್ನು ಪಡೆಯಲಿಲ್ಲವೇಕೆ ಎಂದು ಅನುಮಾನ ಪಡುತ್ತಿದ್ದಾರೆ.. ಒಟ್ಟಾರೆ ಸದ್ಯ ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಇಬ್ಬರು ತಂದೆ ತಾಯಿಯಾಗಿ ಅದರ ಖುಷಿಯ ಅನುಭವ ನನ್ನ ಪಡೆಯುತ್ತಿದ್ದಾರೆ..