- February 17, 2022
ಈವರ್ಷದ ಹುಟ್ಟುಹಬ್ಬ ದರ್ಶನ್ ಗೆ ಸಖತ್ ಸ್ಪೆಷಲ್ ಕಾರಣ ಇಲ್ಲಿದೆ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡ್ರು …ಕಳೆದ 2ವರ್ಷಗಳಂತೆ ಈ ವರ್ಷವೂ ಕೂಡ ದರ್ಶನ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಹುಟ್ಟುಹಬ್ಬಕ್ಕೂ ಮುಂಚೆಯೇ ಅಭಿಮಾನಿಗಳಿಗೆ ತಿಳಿಸಿದ್ದರು… ಕೋವಿಡ್ ಪರಿಸ್ಥಿತಿ ಇರುವುದರಿಂದ ಈ ಬಾರಿಯ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುವುದಿಲ್ಲ… ಅದಷ್ಟೇ ಅಲ್ಲದೆ ನಾನು ಮನೆಯಲ್ಲಿ ಕೂಡ ಯಾರಿಗೂ ಸಿಗುವುದಿಲ್ಲ ಆದ್ದರಿಂದ ದಯಮಾಡಿ ಅಭಿಮಾನಿಗಳು ತಾವಿದ್ದಲ್ಲಿಯೆ ನನಗೆ ಶುಭಕೋರಿ ಎಂದು ಮನವಿ ಮಾಡಿದ್ದರು ..
ಇನ್ನು ಸ್ನೇಹಿತರೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ದರ್ಶನ್ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ.ಮ. ಈ ವರ್ಷದ ಹುಟ್ಟುಹಬ್ಬದ ದಿನವನ್ನ ತಮ್ಮ ಕುಟುಂಬದವರಿಗಾಗಿ ಮೀಸಲಾಗಿಟ್ಟರು ದರ್ಶನ್ …ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಪುತ್ರ ವಿನೀಶ್ ದರ್ಶನ್ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ…ಸದ್ಯ ದರ್ಶನ್ ಪತ್ನಿ ಹಾಗೂ ಮಗನ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ….
ಪ್ರತಿವರ್ಷ ಅಭಿಮಾನಿಗಳು ಹಾಗೂ ಸಿನಿಮಾದವರೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ದರ್ಶನ್ ಈ ವರ್ಷ ಫ್ಯಾಮಿಲಿಗಾಗಿ ಒಂದಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ…. ಈ ವಿಡಿಯೋ ನೋಡಿದ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ ….