- January 12, 2022
ಈ ವಾರದ ಗೋಲ್ಡನ್ ಗ್ಯಾಂಗ್ ಸೇರಲಿದ್ದಾರೆ ಮುಂಗಾರುಮಳೆ ತಂಡ …

ಜೀ ಕನ್ನಡ ವಾಹಿನಿಯಲ್ಲಿ ಪ್ರತೀ ವಾರಾಂತ್ಯದಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಈ ವಾರ ಮುಂಗಾರು ಮಳೆ ಸಿನಿಮಾ ತಂಡ ಭಾಗಿಯಾಗಲಿದೆ …

ಮುಂಗಾರು ಮಳೆ ಸಿನಿಮಾಗೆ ಕಥೆ ಬರೆದ ಪ್ರೀತಮ್ ಗುಬ್ಬಿ ಕ್ಯಾಮೆರಾಮ್ಯಾನ್ ಕೃಷ್ಣ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಸಂಗೀತ ನಿರ್ದೇಶಕ ಮನೋಮೂರ್ತಿ ಹೀಗೆ ಭಾರತೀಯ ಸಿನಿಮಾ ರಂಗದಲ್ಲಿ ಇತಿಹಾಸ ಸೃಷ್ಟಿ ಮಾಡಲು ಕಾರಣರಾದಂತಹ ಮುಂಗಾರು ಮಳೆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿ ಕಲಾವಿದರು ಹಾಗೂ ತಂತ್ರಜ್ಞರು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ …

ಕಳೆದ ವಾರ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ತರುಣ್ ಸುಧೀರ್, ಪ್ರೇಮ್, ಶರಣ್ ಹಾಗೂ ಅವರ ಕುಟುಂಬಗಳು ಭಾಗಿಯಾಗಿತ್ತು …ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಎರಡನೇ ಸಂಚಿಕೆಯಲ್ಲಿ ಮುಂಗಾರು ಮಳೆಯ ತಂಡ ಪ್ರೇಕ್ಷಕರಿಗೆ ಗೊತ್ತಿಲ್ಲದ ಮತ್ತಷ್ಟು ವಿಚಾರಗಳನ್ನ ಬಿಚ್ಚಿಡಲಿದೆ
