- January 12, 2022
ಬಯೋ ಬಬಲ್ ನಲ್ಲಿ ನಡೆಯಿತು ವಾಮಿಕ ಹುಟ್ಟುಹಬ್ಬ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕ ಹುಟ್ಟುಹಬ್ಬವನ್ನ ಇತ್ತೀಚೆಗಷ್ಟೇ ಆಚರಣೆ ಮಾಡಲಾಯಿತು.. ಎಲ್ಲ ಕಡೆ ಒಮಿಕ್ರಾನ್ ಹಾಗೂ ಕೋವಿಡ್ ವೈರಸ್ ಹೆಚ್ಚಾಗಿರುವ ಕಾರಣ ವಿರೂಕ್ಷ ದಂಪತಿ ಸಖತ್ ಪ್ಲಾನ್ ಮಾಡಿ ಮಗಳ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ ..

ಈ ಮೊದಲ ವರ್ಷದ ವಾಮಿಕ ಹುಟ್ಟುಹಬ್ಬವನ್ನ ಬಯೋ ಬಬಲ್ ನಲ್ಲಿ ಆಚರಣೆ ಮಾಡಿದ್ದಾರೆ.. ಆರಂಭದಲ್ಲಿ ಬಯೋ ಬಬಲ್ ನಲ್ಲಿ ಹುಟ್ಟುಹಬ್ಬ ಹೇಗೆ ಆಚರಣೆ ಮಾಡುವುದು ಎಂದು ಆತಂಕದಲ್ಲಿದ್ದ ದಂಪತಿಗಳು ನಂತರ ಅದೇ ರೀತಿಯಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿ ಎಂಜಾಯ್ ಮಾಡಿದ್ದಾರೆ ..

ಇನ್ನು ಈ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಅನುಷ್ಕಾ ಹಾಗೂ ವಿರಾಟ್ ಫೋಟೋ ಮೂಲಕ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ… ಅನುಷ್ಕಾ ಮತ್ತು ವಿರಾಟ್ ಇರುವ 1ಫೋಟೋವನ್ನು ಶೇರ್ ಮಾಡಿದ್ದು …ಮತ್ತೊಂದು ಫೋಟೋದಲ್ಲಿ ಸುಂದರ ಸಂಜೆಯನ್ನು ಮತ್ತಷ್ಟು ಸುಂದರವಾಗಿ ಮಾಡಿದವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ ಇನ್ನು ವಿರುಕ್ಷಾ ದಂಪತಿ ವಾಮಿಕಾಳ ಪ್ರೈವೆಸಿಗೆ ಹೆಚ್ಚು ಒತ್ತು ನೀಡಿದ್ದು ಮಗಳಿಗೆ 1ವರ್ಷವಾದರೂ ಕೂಡ ಎಲ್ಲಿಯೂ ಮಗಳ ಫೋಟೋವನ್ನು ರಿವೀಲ್ ಮಾಡಿಲ್ಲ…