• January 13, 2022

ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಾಗಚೈತನ್ಯ !

ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಾಗಚೈತನ್ಯ !

ಸಮಂತಾ ಹಾಗೂ ನಾಗಚೈತನ್ಯ ತಮ್ಮ ವಿಚ್ಛೇದನದ ವಿಚಾರವನ್ನ ಕಳೆದ ವರ್ಷ ಸಾಮಾಜಿಕ ಜಾಲತಾಣದ ಮೂಲಕ ಅನೌನ್ಸ್ ಮಾಡಿದ್ದರು…ಇಬ್ಬರು ಕೂಡ ಮ್ಯೂಚ್ಯುಯಲ್ ಆಗಿ ಡಿವೋರ್ಸ್ ಪಡೆದುಕೊಂಡಿದ್ದೇವೆ ಎಂದು ಬಹಿರಂಗಪಡಿಸಿದರು ..

ಸಾಕಷ್ಟು ಸಂದರ್ಭದಲ್ಲಿ ಸಮಂತಾ ತಮ್ಮ ವಿಚ್ಛೇದನದ ಬಗ್ಗೆ ಹಲವು ಕಡೆಯಲ್ಲಿ ಮಾತನಾಡಿದ್ದರು .. ಆದರೆ ನಾಗಚೈತನ್ಯ ಇಲ್ಲಿಯವರೆಗೂ ಇಲ್ಲಿಯೂ ತಮ್ಮ ವಿಚ್ಛೇದನ ವಿಚಾರದ ಬಗ್ಗೆ ಮಾತನಾಡಲೂ ಇಷ್ಟಪಡುತ್ತಿರಲಿಲ್ಲ ..ಆದರೆ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಜೊತೆ ತಮ್ಮ ವಿಚ್ಛೇದನದ ಬಗ್ಗೆ ನಾಗಚೈತನ್ಯ ಮೊದಲ ಬಾರಿಗೆ ಮೌನ ಮುರಿದಿದ್ದಾರೆ …

ಅವಳು ಖುಷಿಯಾಗಿದ್ದರೆ ನಾನು ಖುಷಿಯಾಗಿದ್ದೇನೆ ಅವಳಿಗೆ ಇದರಿಂದ ಸಂತೋಷ ಸಿಕ್ಕಿದೆ ಎನ್ನುವುದಾದರೆ ನನಗೂ ಕೂಡ ಸಂತೋಷ ಸಿಕ್ಕಿದೆ ಇಬ್ಬರೂ ಕೂಡ ಸ್ವನಿರ್ಧಾರದಿಂದ ವಿಚ್ಛೇದನ ಪಡೆದಿದ್ದೇವೆ ..ಇಬ್ಬರ ಸಂತೋಷಕ್ಕಾಗಿ ಈ ನಿರ್ಧಾರ ಎಂದು ನಾಗಚೈತನ್ಯ ತಿಳಿಸಿದ್ದಾರೆ…ಸದ್ಯ ನಾಗಚೈತನ್ಯ ಅಭಿನಯದ ಬಂಗಾರ ರಾಜ ಹಾಗೂ ಲಾಲ್ ಸಿಂಗ್ ಚಡ್ಡಾ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದೆ.. ಅತ್ತ ಸಮಂತಾ ಕೂಡ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ….ಒಟ್ಟಾರೆ ಇವರಿಬ್ಬರ ವಿಚ್ಛೇದನದ ವಿಚಾರ ಅಭಿಮಾನಿಗಳಿಗೆ‌ಇನ್ನು ಕೂಡ ಅರಗಿಸಿಕೊಳ್ಳದ ವಿಚಾರವಾಗಿದೆ..

Leave a Reply

Your email address will not be published. Required fields are marked *