- December 21, 2021
ಅರವಿಂದ್ ಜತೆ ಫೋಟೋ ಶೇರ್ ಮಾಡಿದ ದಿವ್ಯಾ ಉರುಡುಗ ನೆಟ್ಟಿಗರಿಂದ ಸ್ಪೆಶಲ್ ಸಲಹೆ ..


ಈ ಬಾರಿಯ ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಾಗಿದ್ದ ಕೆ ಪಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ…ಅದಷ್ಟೇ ಅಲ್ಲದೆ ಈಗಾಗಲೇ ಇಬ್ಬರ ಮಧ್ಯೆ ಪ್ರೀತಿ ಮೂಡಿದೆ ಎನ್ನುವ ಟಾಕ್ ಎಲ್ಲೆಡೆ ಶುರುವಾಗಿದ್ದು ಇಬ್ಬರೂ ಅಧಿಕೃತವಾಗಿ ಈ ವಿಚಾರವನ್ನು ಅನೌನ್ಸ್ ಮಾಡುವುದಷ್ಟೇ ಬಾಕಿ ಬಾಕಿ ಇದೆ….

ಇನ್ನು ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ನಂತರವೂ ದಿವ್ಯಾ ಹಾಗೂ ಕೆ ಪಿ ಅರವಿಂದ್ ಇಬ್ಬರು ಜೋಡಿ ಹಕ್ಕಿಗಳಂತೆ ಎಲ್ಲೆಡೆ ಓಡಾಡುತ್ತಿದ್ದಾರೆ… ಇತ್ತೀಚೆಗೆ ದಿವ್ಯ ಹಾಗೂ ಅರವಿಂದ್ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಜತೆಗಿರುವ ಹಾಗೂ ಇಬ್ಬರೂ ಟ್ರಾವೆಲ್ ಮಾಡುವ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ …ಈ ಮೂಲಕ ತಾವಿಬ್ಬರೂ ಆತ್ಮೀಯ ಸ್ನೇಹಿತರು ಅನ್ನೋದನ್ನ ಕನ್ಫರ್ಮ್ ಮಾಡುತ್ತಲೇ ಇರುತ್ತಾರೆ….

ಇತ್ತೀಚೆಗಷ್ಟೇ ನಟಿ ದಿವ್ಯಾ ಉರುಡುಗ ಕೆ ಪಿ ಅರವಿಂದ್ ಜತೆ ಬೈಕ್ ರೈಡ್ ಮಾಡಿರೋ ಫೋಟೋವನ್ನು ಶೇರ್ ಮಾಡಿದ್ದಾರೆ.. ಇಬ್ಬರ ಫೋಟೋ ನೋಡಿದ ನೆಟ್ಟಿಗರು ಇಬ್ಬರಿಗೂ ಸ್ಪೆಷಲ್ ಸಲಹೆಯನ್ನ ನೀಡಿದ್ದಾರೆ ..
ಅಷ್ಟಕ್ಕೂ ದಿವ್ಯಾ ಹಾಗೂ ಕೆಪಿ ಅರವಿಂದ್ ಗೆ ನೆಟ್ಟಿಗರು ಕೊಟ್ಟಸಲಹೆ ಏನಪ್ಪಾ ಅಂತಂದ್ರೆ.. ನೀವಾದರೂ ಮದುವೆ ಆಗಿ ಅನ್ನೋದು….ಹೌದು ಬಿಗ್ ಬಾಸ್ ನಲ್ಲಿ ಲವ್ ಮಾಡಿ ಹೊರಗೆಬಂದು ಲವ್ ಇಲ್ಲ ಅನ್ನೋರೇ ಹೆಚ್ಚು ನಿಮ್ಮ ಪ್ರೀತಿಯನ್ನು ಬಿಗ್ ಬಾಸ್ ಸೀಮಿತವಾಗಿ ಸಬೇಡಿ ಎಂದು ಸಾಕಷ್ಟು ಮಂದಿ ಸ್ಪೆಷಲ್ ಸಲಹೆಯನ್ನು ನೀಡಿದ್ದಾರೆ …ಸದ್ಯ ಜೋಡಿಹಕ್ಕಿಗಳಂತೆ ಓಡಾಡುತ್ತಿದ್ದು, ದಿವ್ಯ ಹಾಗೂ ಕೆ ಪಿ ಅರವಿಂದ್ ನಿಜಕ್ಕೂ ಹಸೆಮಣೆ ಏರುತ್ತಾರಾ…ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ…ಅನ್ನೋದು ಎಲ್ಲರ ಕ್ಯೂರಿಯಾಸಿಟಿಯಾಗಿದೆ …

