• February 24, 2022

ಮಲೆಯಾಳಂ ಸೂಪರ್ ಹಿಟ್ ಚಲನಚಿತ್ರ “ಫೋರೆನ್ಸಿಕ್” ಈಗ ಕನ್ನಡಕ್ಕೆ ಎಂಟ್ರಿ

ಮಲೆಯಾಳಂ ಸೂಪರ್ ಹಿಟ್ ಚಲನಚಿತ್ರ “ಫೋರೆನ್ಸಿಕ್” ಈಗ ಕನ್ನಡಕ್ಕೆ ಎಂಟ್ರಿ

ಮಲೆಯಾಳಂ ನಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚು ಬರುತ್ತದೆ ಎಂಬ ಮಾತು ಎಲ್ಲೆಡೆ ಇದೆ. ಆ ಪೈಕಿ ವಿಭಿನ್ನ ಕಥಾಹಂದರ ಹೊಂದಿರುವ “ಫೋರೆನ್ಸಿಕ್” ಚಿತ್ರವೂ ಒಂದು. ಈ ಚಿತ್ರ ಮಲೆಯಾಳಂ ನಲ್ಲಿ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದಿತ್ತು.

ಈ ಚಿತ್ರ ನೋಡಿ ಪ್ರಭಾವಿತರಾದ ಗೋಪಿನಾಥ್ ಹಾಗೂ ಚಂದ್ರಶೇಖರ್ ನಾಯ್ಡು “ಅಂತಿಮ‌ ಕ್ಷಣ” ಎಂಬ ಹೆಸರಿನಿಂದ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಡಬ್ಬಿಂಗ್ ಕಾರ್ಯ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ‌ತಿಳಿಯಲಿದೆ.

ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಟೊವಿನೊ‌ ಥಾಮಸ್, ರೆಬಾ ಮೋನಿಕಾ, ಮಮತ ಮೋಹನದಾಸ್,‌ ಪ್ರತಾಪ್ ಪೋಪನ್ , ಜಿಜುಜಾನ್ ಮುಂತಾದವರಿದ್ದಾರೆ.

ಜೆಕ್ಸ್ ಬಿಜೋಯ್ ಸಂಗೀತ ನಿರ್ದೇಶನ, ಅಖಿಲ್ ಜಾರ್ಜ್ ಛಾಯಾಗ್ರಹಣ, ಶಮೀರ್ ಅಹಮದ್ ಸಂಕಲನ ಈ ಚಿತ್ರಕ್ಕಿದೆ.
ಬಿ.ಮಂಜುನಾಥ್ ಹಾಗೂ ರಜನೀಶ್ ದೇವ ಸಂಭಾಷಣೆ ಬರೆದಿದ್ದಾರೆ.

Leave a Reply

Your email address will not be published. Required fields are marked *