- February 25, 2022
ಮತ್ತೆ ನಿರ್ದೇಶನದತ್ತ ದುನಿಯ ವಿಜಯ್ ಚಿತ್ತ

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತೆ ನಿರ್ದೇಶನ ಮಾಡಲು ಮನಸ್ಸು ಮಾಡಿದ್ದಾರೆ… ಹೌದು ಇತ್ತೀಚಿಗಷ್ಟೆ ಬಿಡುಗಡೆಯಾದ ಸಲಗ ಸಿನಿಮಾವನ್ನ ದುನಿಯಾ ವಿಜಯ್ ನಿರ್ದೇಶನ ಮಾಡುವುದರ ಜೊತೆಗೆ ನಟಿಸಿದ್ದರು… ಈಗ ಮತ್ತೆ ದುನಿಯಾ ವಿಜಯ್ ಮತ್ತೊಂದು ಸಿನಿಮಾವನ್ನ ನಿರ್ದೇಶನ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ…
ಹೌದು ದುನಿಯಾ ವಿಜಿ ಅಭಿನಯದ ಇಪ್ಪತ್ತೆಂಟನೇ ಸಿನಿಮಾವನ್ನ ಸ್ವತಃ ವಿಜಯ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ…ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು ಇದೊಂದು ಮಾಸ್ ಕಂಟೆಂಟ್ ಇರುವ ಸಿನಿಮಾ ಅನ್ನೋದು ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತಿದೆ… ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹಾಕುತ್ತಿದ್ದು.. ವಿಜಿ ಅವರ ನಿರ್ದೇಶನದಲ್ಲಿ ಮತ್ತೊಂದು ಮಾಸ್ ಎಂಟರ್ಟೇನ್ಮೆಂಟ್ ಸಿನಿಮಾ ತೆರೆಗೆ ಬರೋದು ಕನ್ಫರ್ಮ್ ಆಗಿದೆ ..

ಸದ್ಯ ಪೋಸ್ಟರ್ ಹಾಗೂ ಟೀಸರ್ ಗಳನ್ನ ಮಾತ್ರ ಪರಿಚಯಿಸಿರುವ ದುನಿಯಾ ವಿಜಯ್ ಶೀಘ್ರದಲ್ಲೇ ಚಿತ್ರದ ಬಗ್ಗೆ ಮಾಹಿತಿ ಕೊಡುವುದಾಗಿ ತಿಳಿಸಿದ್ದಾರೆ… ಸದ್ಯ ದುನಿಯಾ ವಿಜಯ್ ಅಭಿನಯದ ಇಪ್ಪತ್ತೆಂಟನೇ ಸಿನಿಮಾದ ಪೋಸ್ಟರ್ ಎಲ್ಲೆಡೆ ಸದ್ದು ಮಾಡುತ್ತಿದೆ