- February 24, 2022
ತಮ್ಮ ಖುಷಿಯ ಕಾರಣ ಹೇಳಿದ ನ್ಯಾಷನಲ್ ಕ್ರಶ್

ನಟಿ ರಶ್ಮಿಕಾ ಮಂದಣ್ಣ ಅವರ ಪುಷ್ಪ ಚಿತ್ರ ಯಶಸ್ಸು ಕಂಡು ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಈಗ ತೆಲುಗಿನಲ್ಲಿ ಶರ್ವಾನಂದ್ ಜೊತೆ ನಟಿಸಿರುವ “ಆಡವಾಳ್ಳು ಮೀಕು ಜೋಹಾರ್ಲು”ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ರಶ್ಮಿಕಾ ತಾವು ಹೇಗೆ ಸದಾ ಖುಷಿಯಾಗಿರುತ್ತೇನೆ ಎಂಬುದನ್ನು ಹಂಚಿಕೊಂಡಿದ್ದಾರೆ.



ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ರಶ್ಮಿಕಾ ಅವರಿಗೆ ಟೀಕೆ ,ನಿಂದನೆಗಳು ಸಾಮಾನ್ಯವಾಗಿದೆ. ಆದರೆ ಇವುಗಳಿಗೆ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಇವುಗಳನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಾರೆ. ರಶ್ಮಿಕಾ ಎಲ್ಲವನ್ನೂ ಹೇಗೆ ಬ್ಯಾಲೆನ್ಸ್ ಮಾಡುತ್ತಾ ಖುಷಿಯಾಗಿರುತ್ತಾರೆ? ಎಂಬ ಜನರ ಪ್ರಶ್ನೆಗೆ ರಶ್ಮಿಕಾ ಮಜವಾದ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ಜನರು ಕೇಳುವ ಪ್ರಶ್ನೆಯನ್ನು ಕ್ಯಾಪ್ಷನ್ ಆಗಿ ಬರೆದಿದ್ದಾರೆ.”ಜನರು : ನೀವು ಯಾವಾಗಲೂ ಹೇಗೆ ಖುಷಿಯಾಗಿರುತ್ತೀರಿ? ನಾನು:”ಎಂದು ಬರೆದಿರುವ ರಶ್ಮಿಕಾ ತಾವು ಹೇಗೆ ಖುಷಿಯಾಗಿರುತ್ತೇನೆ ಎಂಬ ವಿಡಿಯೋ ಹಂಚಿಕೊಂಡಿದ್ದು ಇದರ ಹಿನ್ನೆಲೆಯಲ್ಲಿ “ಮೈಂಡ್ ಮೈ ಬ್ಯುಸಿನೆಸ್” ಹಾಡನ್ನು ಹಾಕುವ ಮೂಲಕ ಅದಕ್ಕೆ ಹೆಜ್ಜೆ ಹಾಕುತ್ತಾ ,ತನ್ನ ಕೆಲಸವನ್ನು ತಾನು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
