- December 22, 2021
ಲವ್ ಯೂ ರಚ್ಚು ಕಾಂಟ್ರುವರ್ಸಿ- ಅಜಯ್ ರಾವ್ ಹಾಗು ಗುರುದೇಶಪಾಂಡೆ ಮಧ್ಯೆ ಮನಸ್ಥಾಪ

ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ಸ್ಥಳದಲ್ಲಿ ವಿದ್ಯುತ್ ತಗುಲಿ ಸಹ ಕಲಾವಿದನೊಬ್ಬ ಪ್ರಾಣ ಬಿಟ್ಟ ಘಟನೆ ಇನ್ನು ಕಣ್ಣಿಗೆ ಕಟ್ಟುವಂತಿರುವಾಗಲೇ ಲವ್ ಯೂ ರಚ್ಚು ಸಿನಿಮಾತಂಡ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ…ವಿಚಿತ್ರ ಎಂದರೆ ಈ ಬಾರಿ ವಿವಾದ ಉಂಟಾಗಿರೋದು ಸಿನಿಮಾತಂಡದ ಒಳಗೆ ಅನ್ನೋದು ಆಶ್ಚರ್ಯಕರವಾದ ಸಂಗತಿ….

ಅಜಯ್ ರಾವ್ ಹಾಗೂ ರಚಿತಾ ಅಭಿನಯದ ಲವ್ ಯೂ ರಚ್ಚು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಚಿತ್ರತಂಡ ಇತ್ತೀಚಿಗಷ್ಟೆ ಸಿನಿಮಾತಂಡ ಸುದ್ದಿಗೋಷ್ಠಿ ಮಾಡುವ ಮೂಲಕ ನಾವು ರಿಲೀಸ್ ಗೆ ರೆಡಿ ಅನ್ನೋ ಮಾತನಾಡಿದ್ರು….ಆದ್ರೆ ಸುದ್ದಿಗೋಷ್ಟಿಯಲ್ಲಿ ಚಿತ್ರದ ನಾಯಕ ಕಾಣಲೇ ಇಲ್ಲ…ಕಾರಣವೇನು ಅಂದ್ರೆ.. ಅದಕ್ಕೂ ಸಿದ್ದ ಉತ್ತರ ಇಟ್ಟುಕೊಂಡಿದ್ದ ಸಿನಿಮಾತಂಡ ಅಜಯ್ ಅವ್ರಿಗೆ ಜ್ವರ ಎಂದು ಸಬೂಬು ಹೇಳಿದ್ದು ಆದ್ರೆ ಇಂದು ಮಾಧ್ಯಮದ ಮುಂದೆ ಮಾತನಾಡಿದ ಅಜಯ್ ರಾವ್ ನನಗೂ ನಿರ್ಮಾಪಕರಾದ ಗುರುದೇಶಪಾಂಡೆ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ…ನನಗೆ ಅವರ ಜೊತೆಯಲ್ಲಿ ಸಿನಿಮಾ ಪ್ರಚಾರ ಮಾಡಲು ಇಷ್ಟವಿಲ್ಲ ಎಂದಿದ್ದಾರೆ…

ನಮ್ಮ ಮಧ್ಯೆ ಇರೋ ವಿವಾದದ ಬಗ್ಗೆ ಹೆಚ್ಚು ಮಾತನಾಡೋಲ್ಲ..ನನಗೆ ಸ್ವಾಭಿಮಾನವಿದೆ.ಗಂಡಸ್ತನ ಇದೆ ಎಂದಿದ್ದಾರೆ…ಇತ್ತ ಅಭಿಮಾನಿಗಳು ಶೂಟಿಂಗ್ ಸೆಟ್ ನಲ್ಲಿ ಸಹಕಲಾವಿದನ ಪ್ರಾಣ ಹೋದ ಘಟನೆಯೇ ಇದಕ್ಕೆ ಕಾರಣ ಅಂತಿದ್ದಾರೆ..ಒಟ್ಟಾರೆ ಟ್ರೇಲರ್ ರಿಲೀಸ್ ಆದ ನಂತ್ರ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು ಈ ಮಧ್ಯೆ ವಿವಾದವೂ ಶುರುವಾಗಿದೆ…

