- December 22, 2021
ಪುಷ್ಪ ಸಿನಿಮಾಗೆ ಫಿದಾ ಆದ ಬಾಲಿವುಡ್ ಸೂಪರ್ ಸ್ಟಾರ್ !

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ…ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚಿತ್ರ ರಿಲೀಸ್ ಆಗಿದ್ದು ಎಲ್ಲಾ ಭಾಷೆಯಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ…
ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡಿರೋ ಪುಷ್ಪ ಸಿನಿಮಾ ಬಗ್ಗೆ ಬಾಲಿವುಡ್ ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ…ಹೌದು ಅಕ್ಷಯ್ ಕುಮಾರ್ ಸಿನಿಮಾತಂಡಕ್ಕೆ ಈ ಮೂಲಕ ಶುಭ ಕೋರಿದ್ದಾರೆ…

ಬಾಲಿವುಡ್ ಅಂಗಳದಲ್ಲಿ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ…ಭಾರತೀಯ ಸಿನಿಮಾರಂಗದಲ್ಲಿ ಪುಷ್ಪ ಸಿನಿಮಾ ಹಿಟ್ ಲೀಸ್ಟ್ ಸೇರಿದೆ..ನಮ್ಮ ಇಂಡಸ್ಟ್ರಿಯ ಮತ್ತೊಂದು ಗೆಲುವು ಇದು..ನಾನು ಆದಷ್ಟು ಬೇಗ ಸಿನಿಮಾ ನೋಡುತ್ತೆನೆ ಎಂದಿದ್ದಾರೆ ಅಕ್ಷಯ್ ಕುಮಾರ್….