- January 5, 2022
ಬಂದೇ ಬಿಡ್ತು ‘ಕನ್ನಡತಿ’ ವೀಕ್ಷಕರು ಕಾತುರದಿಂದ ಕಾಯುತ್ತಿದ್ದ ಆ ಸುದಿನ..

ಇನ್ನು ಅಮ್ಮಮ್ಮ ತನ್ನ ಬಾವಿ ಸೊಸೆ ಬಳಿ ಯಾವಾಗ ಮಗನ ಮದುವೆ ವಿಚಾರ ಚರ್ಚೆ ಮಾಡುತ್ತಾರೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ…ಈಗಾಗಲೇ ಪ್ರೇಕ್ಷಕರ ಇಚ್ಛೆಯಂತೆಯೇ ಹರ್ಷ ಹಾಗೂ ಭುವಿ ತಮ್ಮ ಪ್ರೀತಿಯನ್ನ ನಿವೇದನೇ ಮಾಡಿಕೊಂಡಾಯಿತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡಿತಿ ಧಾರಾವಾಹಿಗೆ ಅಪಾರವಾದ ಅಭಿಮಾನಿ ಬಳಗವಿದೆ...ಆರಂಭದಿಂದಲೂ ಈ ಧಾರವಾಹಿ ಕಥೆ ಹಾಗೂ ಕಲಾವಿದರಿಂದ ಪ್ರೇಕ್ಷಕರ ಹೆಚ್ಚು ಗಮನ ಸೆಳೆಯುತ್ತಿದೆ…ಭುವಿ ಹಾಗೂ ಹರ್ಷ ಮಧ್ಯೆ ಲವ್ ಸ್ಟಾರ್ಟ್ ಆದಾಂಗಿನಿಂದ ಪ್ರೇಕ್ಷಕರಂತು ಹುಚ್ಚೇದ್ದು ಧಾರಾವಾಹಿ ನೋಡಲು ಆರಂಭಿಸಿದ್ದಾರೆ..

ಈಗ ಅಮ್ಮಮ್ಮನ ಸರದಿಯಾಗಿದ್ದು ಇದಿನ ಸಂಚಿಕೆಯಲ್ಲಿ ಅದೂ ಕೂಡ ನಡೆದು ಹೋಗಲಿದೆ..ಸದ್ಯ ಕನ್ನಡತಿ ತಂಡ ಈ ಬಗ್ಗೆ ಪ್ರೋಮೋ ಬಿಡುಗಡೆ ಮಾಡಿದ್ದು ಅದನ್ನ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ…