- January 5, 2022
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

ಸ್ಯಾಂಡಲ್ ವುಡ್ ನ ನಟಿ ಶುಭಾ ಪೂಂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ..ಕಳೆದ ವರ್ಷದಲ್ಲಿ ಶುಭ ತಮ್ಮ ಗೆಳೆಯ ಸುಮನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಶೀಘ್ರದಲ್ಲೇ ಕಲ್ಯಾಣ ಮಾಡಿಕೊಳ್ಳುತ್ತದೆ ಎಂದು ಕೂಡ ತಿಳಿಸಿದ್ದರು.. ಆದರೆ ಈಗ ಏಕಾಏಕಿ ಸದ್ದಿಲ್ಲದೆ ಶುಭಾ ಪೂಂಜಾ ಮದುವೆ ಮಾಡಿಕೊಂಡಿದ್ದಾರೆ ..

ಶುಭಾ ಪೂಂಜಾ ತಮ್ಮ ಊರಾದ ಮಜಲಬೆಟ್ಟುಬೀಡು ನಲ್ಲಿ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ… ಸಾಮಾನ್ಯವಾಗಿ ಸಿನಿಮಾ ತಾರೆಯರು ಅದ್ದೂರಿಯಾಗಿ 2 -3ದಿನಗಳ ಕಾಲ ಮದುವೆಯಾಗುತ್ತಾರೆ… ಆದರೆ ಶುಭಾ ಪೂಂಜಾ ಸರಳವಾಗಿ ವಿವಾಹ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ ..

ಶುಭಾ ಪೂಂಜ ಮದುವೆಯಲ್ಲಿ ಕೇವಲ ಆತ್ಮೀಯರು ಹಾಗೂ ಸಂಬಂಧಿಕರು ಬಾಗಿಯಾಗಿದ್ದಾರೆ.. ನಿರ್ದೇಶಕಿ ಸುಮನಾ ಕಿತ್ತೂರ್ ,ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಇನ್ನೂ ಅನೇಕರು ಮದುವೆಗೆ ಬಂದು ವಧು ವರರನ್ನ ಆಶೀರ್ವದಿಸಿದ್ದಾರೆ…ಬಿಗ್ ಬಾಸ್ ನಿಂದ ಹೊರಬಂದ ನಂತರ ಶುಭಾ ಪೂಂಜ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಜೀವನವನ್ನು ಆರಂಭ ಮಾಡಿದ್ದಾರೆ …


