- January 5, 2022
ಏಕ್ ಲವ್ ಯಾ ಸಿನಿಮಾಗೆ ಕೊರೋನಾ ಕಂಟಕ

ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಇದೇ ತಿಂಗಳು 21ರಂದು ಬಿಡುಗಡೆಯಾಗಬೇಕಿತ್ತು.. ಈಗಾಗಲೇ ಅದಕ್ಕಾಗಿ ಸಿನಿಮಾತಂಡ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು ಚಿತ್ರದ ಹಾಡುಗಳನ್ನ ಪ್ರಮುಖ ರಾಜ್ಯದ ಜಿಲ್ಲೆಗಳಲ್ಲಿ ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರಚಾರವನ್ನ ಕೂಡ ಜೋರಾಗಿ ಮಾಡಿತ್ತು ..

ಆದರೆ ನೆನ್ನೆ ಸರ್ಕಾರ ಹೊರಡಿಸಿರುವಂತಹ ಹೊಸ ಗೈಡ್ ಲೈನ್ ಅನ್ನು ಪರಿಗಣಿಸಿ ಏಕಲವ್ಯ ಸಿನಿಮಾ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ ..ಮೈಸೂರಿನಲ್ಲಿ ಇಂದು ಏಕ್ ಲವ್ ಯಾ ಚಿತ್ರದ ಟ್ರೇಲರ್ ಲಾಂಚ್ ಕೂಡಾ ಹಮ್ಮಿಕೊಂಡಿತ್ತು ಸಿನಿಮಾತಂಡ… ಆದರೆ ಕೋವಿಡ್ ಗೈಡ್ ಲೈನ್ಸ್ ನಿಂದಾಗಿ ಈಗ ಸಿನಿಮಾ ತಂಡ ಟ್ರೇಲರ್ ಲಾಂಚ್ ಕಾರ್ಯಕ್ರಮವನ್ನು ಮುಂದೂಡಿದೆ ..
ಸರ್ಕಾರ ಈಗಾಗಲೇ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಘೋಷಣೆ ಮಾಡಿದ್ದು ಇದರ ಪರಿಣಾಮ ಸಿನಿಮಾರಂಗದ ಮೇಲೆ ಬಿದ್ದಿದೆ…ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಗೂ ಶೇಕಡಾ ಐವತ್ತು ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡುವ ನಿಯಮವನ್ನು ಜಾರಿ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.. ಹಾಗಾಗಿ ಬಿಡುಗಡೆಗೆ ತಯಾರಾಗಿರುವ ಸಿನಿಮಾ ತಂಡಗಳು ಚಿತ್ರದ ರಿಲೀಸ್ ಡೇಟನ್ನು ಮುಂದಕ್ಕೆ ಹಾಕಿಕೊಳ್ಳುತ್ತಿದೆ ..

ಏಕ್ ಲವ್ ಯಾ ಸಿನಿಮಾವನ್ನ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರಗ ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು.. ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದಾರೆ… ಸಿನಿಮಾದಲ್ಲಿ ರಾಣಾ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ…