- January 7, 2022
ಅದಿತಿ ಪ್ರಭುದೇವ ಅವರ ಭಾವಿ ಪತಿ ಬಗ್ಗೆ ನಿಮಗೆಷ್ಟು ಗೊತ್ತು ?

ಸ್ಯಾಂಡಲ್ ವುಡ್ ನ ನಟಿ ಅದಿತಿ ಪ್ರಭುದೇವ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ… ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅದಿತಿ ಪ್ರಭುದೇವ ಈಗಾಗಲೆ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಪಕ್ಕದ ಮನೆ ಹುಡುಗಿ ಎನ್ನುವ ಫೀಲ್ ತರಿಸಿದ್ದಾರೆ ..ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರೋ ಅಧಿತಿಯ ಬಾವಿ ಪತಿಯ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ ಇಲ್ಲಿದೆ ….
ಅದಿತಿ ಪ್ರಭುದೇವ ಹುಡುಗನ ಹೆಸರು ಯಶಸ್..

ಅದಿತಿ ಮದುವೆಯಾಗಲಿರೋ ಹುಡುಗನ ಹೆಸರು ಯಶಸ್..ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದ ಇವರಿಬ್ಬರು ಈಗ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ…
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟಿ
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದ ಅದಿತಿ ಸದ್ಯಕ್ಕಂತು ಮದುವೆ ಬಗ್ಗೆ ತಲೆ ಕೆಡಿಸಿಕೊಳ್ಳೊದಿಲ್ಲ ಅನ್ನೋ ಲೆಕ್ಕಾಚಾರ ಅಭಿಮಾನಿಗಳದಾಗಿತ್ತು .ಆದ್ರೆ ಹೊಸ ವರ್ಷದ ಹಿಂದಿನ ದಿನ ಅದಿತಿ ಹುಡುಗನ ಜೊತೆ ಫೋಟೋ ಶೇರ್ ಮಾಡೋ ಮೂಲಕ ನಿಶ್ಚಿತಾರ್ಥವಾದ ವಿಚಾರ ಬಹಿರಂಗ ಪಡೆಸಿದ್ದಾರೆ…
ಕಾಫಿ ತೋಟದ ಮಾಲೀಕ ಯಶಸ್.
ಅಧಿತಿಯನ್ನ ಕೈಹಿಡಿಯುತ್ತಿರೋ ಹುಡುಗ ಕಾಫಿ ತೋಟದ ಮಾಲೀಕನಾಗಿದ್ದಾರೆ..ಚಿಕ್ಕಮಗಳೂರಿನ ಹುಡುಗನಾಗಿದ್ದು ಕಾಫಿ ಬೆಳೆಗಾರನೂ ಹೌದು..
ಬಾವಿ ಪತಿ ಜೊತೆ ಹೊಸ ವರ್ಷ ಆಚರಣೆ
ನಿಶ್ಚಿತಾರ್ಥ ಆಗಿದ್ದೆ ಆಗಿದ್ದು ಈಗ ಅಫಿಷಿಯಲ್ ಆಗಿ ಅದಿತಿ ಹಾಗೂ ಯಶಸ್ ಡೇಟಿಂಗ್ ಶುರು ಮಾಡಿದ್ದಾರೆ..ನ್ಯೂ ಇಯರ್ ಅನ್ನು ಅದಿತಿ ಬಾವಿ ಪತಿಯ ಮನೆಯಲ್ಲಿಯೇ ಕಳೆದಿದ್ದಾರೆ..
ಡೇಟಿಂಗ್ ಗಾಗಿ ಕಾಡನ್ನು ಆಯ್ಕೆ ಮಾಡಿಕೊಂಡ ಜೋಡಿ
ಗಂಡನ ಮನೆಯನ್ನ ಒಂದು ಸುತ್ತು ಹಾಕಿದ ಅದಿತಿ ನಂತರ ಮನೆಯ ಹತ್ತಿರವೇ ಇರೋ ಕಾಡಿನಲ್ಲಿ ಒಂದು ದಿನ ಕಳೆಯುವ ಮೂಲಕ ಡೇಟ್ ಮಾಡಿದ್ದಾರೆ..


