- January 7, 2022
ಬಾಯ್ ಫ್ರೆಂಡ್ ತೆಗೆದ ಫೋಟೋ ಶೇರ್ ಮಾಡಿದ ಆಲಿಯಾ !

ಬಾಲಿವುಡ್ ನಟಿ ಆಲಿಯಾ ಭಟ್ ಸದ್ಯ ಆರ್ ಆರ್ ಆರ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ… ಸದ್ಯ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿರುವ ಕಾರಣ ಆಲಿಯಾಗೆ ಕೊಂಚ ರಿಲೀಫ್ ಸಿಕ್ಕಿದ್ದು ಈಗ ಸಿಕ್ಕ ಸಮಯವನ್ನ ಪರ್ಸನಲ್ ಲೈಫ್ ಗಾಗಿ ಸ್ಪೆಂಡ್ ಮಾಡುತ್ತಿದ್ದಾರೆ…ಇನ್ಮು ಈ ವರ್ಷದ ನ್ಯೂ ಇಯರ್ ಅನ್ನ ಅರ್ಥಪೂರ್ಣವಾಗಿ ಕಳೆದಿದ್ದಾರೆ ಆಲಿಯಾ ..

ಸಾಮಾನ್ಯವಾಗಿ ಸೆಲೆಬ್ರಿಟಿಗಳು ನ್ಯೂ ಇಯರ್ ಪಾರ್ಟಿ ಮಾಡುವ ಮೂಲಕ ಅಥವಾ ವಿದೇಶ ಪ್ರಯಾಣ ಮಾಡಿ ಅಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡುವ ಮೂಲಕ ಕಳೆಯುತ್ತಾರೆ …ಆದರೆ ಆಲಿಯಾ ಭಟ್ ಈ ಬಾರಿಯ ಹೊಸ ವರ್ಷವನ್ನು ಪ್ರಕೃತಿಯ ಮಡಿಲಲ್ಲಿ ಕಳೆದಿದ್ದಾರೆ….



ನ್ಯೂ ಇಯರ್ ಆದ ನಂತರ ತಮ್ಮ ಫೋಟೋಗಳನ್ನು ಶೇರ್ ಮಾಡಿರುವ ಆಲಿಯಾ ಭಟ್ ನನ್ನ ಬಾಯ್ ಫ್ರೆಂಡ್ ತೆಗೆದಿರುವ ಫೋಟೋಗಳಿವು ಎಂದು ಕ್ಯಾಪ್ಷನ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ…ಅಷ್ಟಕ್ಕೂ ಆಲಿಯಾ ತನ್ನ ಬಾಯ್ ಫ್ರೆಂಡ್ ಎಂದು ಹೇಳಿಕೊಂಡಿರುವುದು ರಣಬೀರ್ ಕಪೂರ್ ಅವರನ್ನ… ಹೌದು ಈ ಬಾರಿಯ ಹೊಸ ವರ್ಷವನ್ನು ಆಲಿಯಾ ಹಾಗೂ ರಣ್ಬೀರ್ ಕಪೂರ್ ಒಟ್ಟಿಗೆ ಸೆಲಬ್ರೇಟ್ ಮಾಡಿದ್ದಾರೆ …ಅಭಯಾರಣ್ಯದಲ್ಲಿ 1ದಿನ ಪೂರ್ತಿ ಕಳೆಯುವ ಮೂಲಕ ಹೊಸ ವರ್ಷದ ಆರಂಭ ಮಾಡಿದೆ ಈ ಬಿಟೌನ್ ನ ಜೋಡಿ ..

