- January 8, 2022
ತೆರೆಮೇಲೆ ರಾಖಿ ಎಂಟ್ರಿ ಡೇಟ್ ಕನ್ಫರ್ಮ್ !

ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.. ಕೋವಿಡ್ ಸೊಂಕು ಹೆಚ್ಚಾಗಿರೋದರಿಂದ ಈ ವರ್ಷವೂ ಕೂಡಾ ರಾಕಿಂಗ್ ಸ್ಟಾರ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಮಾಡಿಕೊಳ್ಳುತ್ತಿಲ್ಲ…
ಮನೆಯಲ್ಲೇ ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಯಶ್ ಅಭಿಮಾನಿಗಳು ಮನೆಯಿಂದಲೇ ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರುವಂತೆ ಮನವಿ ಮಾಡಿದ್ದರು…ಇನ್ನು ರಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಗೆ ಸಿದ್ಧವಾಗಿತ್ತು.. ಚಿತ್ರತಂಡ ಕೂಡ ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದೆ…
ಕೋವಿಡ್ ಸೋಂಕು ಹೆಚ್ಚಾದ ಕಾರಣ ಸಾಕಷ್ಟು ಸಿನಿಮಾಗಳು ಈಗಾಗಲೇ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ ಅದರಂತೆಯೇ ಕೆಜಿಎಫ್ ಸಿನಿಮಾ ಕೂಡ ಬಿಡುಗಡೆ ದಿನಾಂಕ ಮುಂದೆ ಹೋಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳಿದ್ದರು…ಆದರೆ ಇಂದು ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಹೊಂಬಾಳೆ ಪ್ರೊಡಕ್ಷನ್ಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಏಪ್ರಿಲ್ 14,ರಂದೆ ಬಿಡುಗಡೆ ಆಗಲಿದೆ ಎನ್ನುವ ಹಿಂಟ್ ಕೊಟ್ಟಿದ್ದಾರೆ..
