- January 5, 2022
ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭ ಮಾಡಿದ ಮೇಘನಾ ರಾಜ್

ನಟಿ ಮೇಘನಾ ರಾಜ್ ಮದುವೆ ಆದ ನಂತರ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೆ ಕಮ್ಮಿ…. ಇನ್ನೇನು ಚಿತ್ರಗಳಲ್ಲಿ ತಮ್ಮ ಕೆಲಸ ಆರಂಭ ಮಾಡಬೇಕು ಅನ್ನುವಷ್ಟರಲ್ಲಿ ಮೇಘನಾರನ್ನ ಬಿಟ್ಟು ಚಿರು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ರು… ಅನಂತರ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ ರಾಜ್ ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ …

ಚಿತ್ರರಂಗದಲ್ಲಿ ಬ್ಯುಸಿ ಆಗುತ್ತಿರುವ ಮೇಘನಾರಾಜ್ ಮೊಟ್ಟಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ.. ಹೌದು ಕಲರ್ಸ್ ಕನ್ನಡದಲ್ಲಿ ಜನವರಿಯಿಂದ 8 ರಿಂದ ಆರಂಭವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಮೇಘನಾರಾಜ್ ತೀರ್ಪುಗಾರರಾಗಿ ಎಂಟ್ರಿಕೊಟ್ಟಿದ್ದಾರೆ…

ಈ ಕಾರ್ಯಕ್ರಮವನ್ನ ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿತ್ತು ಮೇಘನಾ ಜತೆಯಲ್ಲಿ ಮಯೂರಿ ಹಾಗೂ ವಿಜಯ ರಾಘವೇಂದ್ರ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ… ಈ ರಿಯಾಲಿಟಿ ಶೋವನ್ನ ಸೃಜನ್ ಲೋಕೇಶ್ ನಿರ್ಮಾಣ ಮಾಡುತ್ತಿದ್ದಾರೆ