- February 23, 2022
ಪೊಲೀಸ್ ಅಧಿಕಾರಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಓಟಿಟಿ ಸ್ಟಾರ್

ಬಹುಮುಖ ಪ್ರತಿಭೆ ಡ್ಯಾನಿಶ್ ಸೇಠ್ ಅವರು ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಗುರುತಿಸಿಕೊಂಡವರು. ಪ್ರಾಂಕ್ ಕಾಲ್ ಗಳ ಮೂಲಕ ದೇಶದಾದ್ಯಂತ ಫೇಮಸ್ ಆಗಿದ್ದ ಡ್ಯಾನಿಶ್ ಸೋಶಿಯಲ್ ಮೀಡಿಯಾ ಮೂಲಕ ಹಲವು ಪಾತ್ರಗಳನ್ನು ಸೃಷ್ಟಿಸಿ ಹಾಸ್ಯದ ಮೂಲಕ ಜನಪ್ರಿಯತೆ ಗಳಿಸಿದ ಪ್ರತಿಭಾವಂತ.

ಇಂತಿಪ್ಪ ಡ್ಯಾನಿಶ್ ಸೇಠ್ ಪುಷ್ಕರ್ ಮಲ್ಲಿಕಾರ್ಜುನ್ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದ “ಹಂಬಲ್ ಪೊಲಿಟಿಶಿಯನ್ ನೊಗರಾಜ್” ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದರು. ಮೊದಲ ಸಿನಿಮಾದಲ್ಲಿಯೇ ಸಿನಿಪ್ರಿಯರನ ಸೆಳೆದ ಡ್ಯಾನಿಶ್ ಪಿಆರ್ ಕೆ ಪ್ರೊಡಕ್ಷನ್ ಅವರ “ಫ್ರೆಂಚ್ ಬಿರಿಯಾನಿ”ಹಾಗೂ ಒನ್ ಕಟ್ ಟು ಕಟ್” ಸಿನಿಮಾಗಳಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗಿದ್ದು ನೆಟ್ಟಿಗರ ಪ್ರಶಂಸೆಗೂ ಪಾತ್ರವಾಗಿತ್ತು. ಇನ್ನು ಹಂಬಲ್ ಪೊಲಿಟಿಶಿಯನ್ ನೊಗರಾಜ್ ವೆಬ್ ಸಿರೀಸ್ ಕೂಡಾ ಬಿಡುಗಡೆಯಾಗಿದ್ದು ಜೀ 5ನಲ್ಲಿ ಪ್ರಸಾರವಾಗುತ್ತಿದೆ.



“ಓಟಿಟಿ ಸ್ಟಾರ್” ಅಂತಲೇ ಕರೆಯಲ್ಪಡುವ ಡ್ಯಾನಿಶ್ “ಸೋಲ್ಡ್” ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಹಿರಿತೆರೆಗೆ ಕಾಲಿಟ್ಟಿದ್ದಾರೆ ಡ್ಯಾನಿಶ್ ಸೇಠ್. ಮಾನವ ಕಳ್ಳ ಸಾಗಾಣಿಕೆ ಕುರಿತಾಗಿ ಇರುವ ಕಥೆಯಾಗಿದ್ದು ಇದರಲ್ಲಿ ಕಾವ್ಯ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
