- February 23, 2022
ಪ್ರಶಸ್ತಿ-ಪುರಸ್ಕಾರಗಳೆಡೆಗೆ ಸಾಗುತ್ತಿರೋ ‘ಗರುಡ ಗಮನ’

“ಗರುಡ ಗಮನ ವೃಷಭ ವಾಹನ”, 2021ರ ಅಂತ್ಯದ ಹೊತ್ತಿಗೆ ಎಲ್ಲರ ಮನೆಮಾತ್ತಾಗಿದ್ದ ಸಿನಿಮಾ. ತನ್ನ ಕಥೆ, ಚಿತ್ರಕಥೆ, ಸಂಭಾಷಣೆ, ನಟರ ಅಭಿನಯ ಇನ್ನು ಹಲವಾರು ಅಂಶಗಳಿಂದ ಭಾರತದದಾದ್ಯಂತ ಮೆಚ್ಚುಗೆ ಪಡೆದಂತ ಕನ್ನಡ ಸಿನಿಮಾ. ಸಿನಿರಂಗದ ಹಲವಾರು ದಿಗ್ಗಜರಿಂದ ಶಭಾಷ್ ಎನಿಸಿಕೊಂಡಿದ್ದ ಚಿತ್ರತಂಡಕ್ಕೆ ಇದೀಗ ಪ್ರಶಸ್ತಿಗಳ ಸಂಭ್ರಮ ಆರಂಭವಾಗೋ ಸಾಧ್ಯತೆಯಿದೆ.

ರಾಜ್ ಬಿ ಶೆಟ್ಟಿಯ ನಿರ್ದೇಶನ ಹಾಗೂ ನಟನೆಗೆ ಮನಸೋಲದವರೇ ಇರಲಿಲ್ಲ. ರಿಷಬ್ ಶೆಟ್ಟಿ ಅಂತೂ ಹರಿಯಾಗಿ ಎಲ್ಲರೊಳಗು ಹೊಕ್ಕಿದ್ದರು. ಇವರಷ್ಟೇ ಅಲ್ಲದೇ ಇನ್ನು ಹಲವಾರು ನಟರು ಸಹ ನಮ್ಮೊಳಗೇ ಕುಳಿತಿದ್ದರು. ಸಂಗೀತ ನಿರ್ದೇಶಕರ ಕೈಚಳಕಕ್ಕೆ ಇಂಪಾಗದ ಕಿವಿಗಳೇ ಇರಲಿಲ್ಲ. 2021ರ ನವೆಂಬರ್ 19ಕ್ಕೆ ಬೆಳ್ಳಿತೆರೆ ಮೇಲೆ ಮೋಡಿಮಾಡಲಾರಂಭಿಸಿ ಜನವರಿಯಲ್ಲಿ Zee5 ಮೂಲಕ ಇಡೀ ದೇಶವನ್ನ ಸೆಳೆದಿತ್ತು ಚಿತ್ರ. ಇದೀಗ ‘ಸಿ ಸಿ ಎಸ್ ಎಸ್’ ಪ್ರಶಸ್ತಿಗಳ 7 ವಿಭಾಗಗಳಲ್ಲಿ ತನ್ನ ಛಾಪು ಮೂಡಿಸಿದೆ,.

‘ಸಿನಿಮಾ ಕ್ರಿಟಿಕ್ಸ್ ಚಾಯ್ಸ್ ಶಾರ್ಟ್ಸ್ ಆ್ಯಂಡ್ ಸಿರೀಸ್(ಸಿಸಿಎಸ್‌ಎಸ್)’ನ ಈ ಸಾಲಿನ ಪ್ರಶಸ್ತಿಗಳಲ್ಲಿ ಬರೋಬ್ಬರಿ 7 ವಿಭಾಗಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರದ ನಾಮನಿರ್ದೇಶನವಾಗಿದೆ. “ಅತ್ಯುತ್ತಮ ನಟ”ನ ವಿಭಾಗದಲ್ಲಿ ರಾಜ್ ಬಿ ಶೆಟ್ಟಿ, “ಅತ್ತ್ಯುತ್ತಮ ಪೋಷಕ ನಟ”ನ ಪಾತ್ರಗಳಲ್ಲಿ ರಿಷಬ್ ಶೆಟ್ಟಿ, “ಅತ್ತ್ಯುತ್ತಮ ನಿರ್ದೇಶಕ” ಹಾಗು “ಅತ್ತ್ಯುತ್ತಮ ಬರವಣಿಗೆ”ಯ ಸಾಲಿನಲ್ಲಿ ರಾಜ್ ಬಿ ಶೆಟ್ಟಿ, “ಅತ್ತ್ಯುತ್ತಮ ಸಂಕಲನ” ಹಾಗೂ “ಅತ್ತ್ಯುತ್ತಮ ಛಾಯಾಗ್ರಾಹಣ”ಗಳ ಭಾಗದಲ್ಲಿ ಪ್ರವೀಣ್ ಶ್ರೀಯಾನ್ ಮತ್ತು “ಅತ್ತ್ಯುತ್ತಮ ಚಿತ್ರ”ದ ಭಾಗದಲ್ಲಿ ಪ್ರಶಸ್ತಿಗರ್ಹ ಸಾಲಿನಲ್ಲಿ ಇರುವುದರ ಮೂಲಕ ಒಟ್ಟು 7 ವಿಭಾಗದಲ್ಲಿ ತನ್ನ ಹೆಸರನ್ನ ಅಚ್ಚೋತ್ತಿಸಿಕೊಂಡ ಕೊಂಡ ಕನ್ನಡ ಚಿತ್ರ ಇದಾಗಿದೆ.

