- February 28, 2022
ನೂರು ಮಿಲಿಯನ್ ವೀಕ್ಷಣೆ ಪಡೆದ ಈ ಹಾಡು ಯಾವುದು ಗೊತ್ತಾ?

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ಅಯೋಗ್ಯ ಸಿನಿಮಾದ “ಏನಮ್ಮಿ ಏನಮ್ಮಿ”ಹಾಡು ಈಗ 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಸಂಭ್ರಮದಲ್ಲಿ ಇರುವ ಚಿತ್ರತಂಡ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು.

“ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ ಮಾಡುತ್ತಾರೆ. 100 ದಿನ ಸಿನಿಮಾ ಓಡಿದರೆ ಆಚರಣೆ ಮಾಡುತ್ತಾರೆ. ಆದರೆ ಹಾಡು 100 ಮಿಲಿಯನ್ ವೀಕ್ಷಣೆ ಪಡೆದುಕೊಂಡಿರುವುದಕ್ಕೆ ಮಾಡುತ್ತಿರುವುದು ತುಂಬಾ ವಿಶೇಷ. ಗಾಯಕ ಹಾಗೂ ಸಂಗೀತ ನಿರ್ದೇಶಕರಿಗೆ ಅವರ ಹಾಡುಗಳಿಂದ ಇಂತಹ ಕ್ರೆಡಿಟ್ ಸಿಗಬಹುದು. ಆದರೆ ನಟನಟಿಗೆ ಇದು ಗ್ರೇಟ್ “ಎಂದಿದ್ದಾರೆ ನಟ ಸತೀಶ್ ನೀನಾಸಂ.

“ಒಂದು ಹಾಡು 100 ಮಿಲಿಯನ್ ವೀಕ್ಷಣೆ ಪಡೆದಿದೆ ಎಂದರೆ ನಿಜಕ್ಕೂ ಅದು ಗ್ರೇಟ್. ಇವೆಲ್ಲಾ ಹೇಗೆ ಸಾಧ್ಯವಾಯಿತು ಅನ್ನುವುದು ಗೊತ್ತಿಲ್ಲ. ಅದು ಗೊತ್ತಾದರೆ ಎಲ್ಲಾ ಹಾಡುಗಳನ್ನು 100 ಮಿಲಿಯನ್ ಮಾಡಬಹುದು. ಕೆಲವು ಹಾಡುಗಳು ಹಿಟ್ ಆಗುತ್ತದೆ ಯಾಕೆಂದರೆ ಚಿತ್ರತಂಡದ ಮೇಲೆ ದೇವರ ಕೃಪೆ ಇರುತ್ತದೆ. ಅಷ್ಟು ಶ್ರಮದಿಂದ ಚಿತ್ರತಂಡ ಕೆಲಸ ಮಾಡಿರುತ್ತದೆ”ಎಂದಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

“ಈ ಹಾಡು ಇಷ್ಟು ಚೆನ್ನಾಗಿದೆ. ಇದು ಜನರಿಗೆ ಇಷ್ಟ ಆಗಿರುವುದಕ್ಕೆ ಖುಷಿಯಾಗುತ್ತಿದೆ. ಈ ಕ್ರೆಡಿಟ್ ಅರ್ಜುನ್ ಜನ್ಯ , ವಿಜಯ್ ಪ್ರಕಾಶ್ , ಚೇತನ್ ಹಾಗೂ ಆಡಿಯೋ ಕಂಪನಿಗೆ ಸೇರುತ್ತೆ. ಡ್ಯಾನ್ಸರ್ , ಮೇಕಪ್ ಆರ್ಟಿಸ್ಟ್ , ವಸ್ತ್ರ ವಿನ್ಯಾಸ ಮಾಡಿದವರಿಗೂ ಕ್ರೆಡಿಟ್ ಹೋಗುತ್ತೆ. ಇವತ್ತಿಗೂ ಇನ್ಸ್ಟಾಗ್ರಾಮ್ ನಲ್ಲಿ ಈ ಹಾಡಿಗೆ ರೀಲ್ಸ್ ಮಾಡ್ತಾರೆ”ಎಂದಿದ್ದಾರೆ ನಟಿ ರಚಿತಾ ರಾಮ್.

