- February 28, 2022
ಬಹುದಿನದ ಕನಸು ನನಸಾಯಿತು ಎಂದ ಬಾಲಿವುಡ್ ನಟಿ

ಅಜಿತ್ ನಟನೆಯ ವಲಿಮೈ ಚಿತ್ರ ಕಳೆದ ವಾರ ಬಿಡುಡೆಯಾಗಿ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ಅಜಿತ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಹುಮಾ ಖುರೇಶಿ ನಟಿಸಿದ್ದಾರೆ. ಅಜಿತ್ ಅವರ ಅಭಿಮಾನಿಗಳು ತೋರುತ್ತಿರುವ ಪ್ರೀತಿಯನ್ನು ಕಂಡ ಹುಮಾ ಕಂಪ್ಲೀಟ್ ಫಿದಾ ಆಗಿದ್ದಾರೆ. ಎಚ್. ವಿನೋತ್ ನಿರ್ದೇಶನದ ವಲಿಮೈ ಚಿತ್ರದಲ್ಲಿ ಹುಮಾ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ಅಜಿತ್ ಅವರ ಅಭಿಮಾನಿಗಳ ಪ್ರೀತಿಗೆ ನಾನು ಮನಸೋತಿದ್ದೇನೆ. ಅಭಿಮಾನಿಗಳು ಅಜಿತ್ ಮೇಲೆ ತೋರಿಸುತ್ತಿರುವ ಪ್ರೀತಿ ಕಂಡು ನಾನು ಆಶ್ಚರ್ಯ ಚಕಿತಳಾಗಿದ್ದೇನೆ. ಅಂತಹ ಅಭಿಮಾನಿಗಳಿಗೆ ನಾನು ಮನಸಾರೆ ಕೃತಜ್ಞತೆ ಸಲ್ಲಿಸುತ್ತೇನೆ” ಎನ್ನುತ್ತಾರೆ ಹುಮಾ.

“ಅಜಿತ್ ಅವರೊಂದಿಗೆ ನಟಿಸಬೇಕು ಎಂಬುದು ನನ್ನ ಬಹು ದಿನದ ಕನಸು. ಆ ಬಹುದಿನಗಳ ಕನಸು ಈಗ ನನಸಾಗಿದೆ. ಪ್ರಸ್ತುತ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಪ್ರಾಮುಖ್ಯತೆ ಹೊಂದಿದೆ. ಈ ಪಾತ್ರವನ್ನು ನನಗೆ ಉಡುಗೊರೆಯಾಗಿ ನೀಡಿರುವ ಅಜಿತ್ ಸರ್, ನಿರ್ದೇಶಕ ಎಚ್. ವಿನೋತ್ , ನಿರ್ಮಾಪಕ ಬೋನಿ ಕಪೂರ್ ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ಹುಮಾ ಖುರೇಶಿ.

ಬಾಲಿವುಡ್ ನಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಹುಮಾ ಹಿಂದೆ ರಜನೀಕಾಂತ್ ಅವರ ಜೊತೆ ಕಾಲ ಚಿತ್ರದಲ್ಲಿ ನಟಿಸಿದ್ದರು.
