- January 6, 2022
ಒಂದೇ ಹೋಟೆಲ್ – ಒಂದೇ ಕ್ಯಾಪ್ಷನ್ ರಶ್ಮಿಕಾ /ವಿಜಯ್ ಮಧ್ಯೆ ಕುಚ್ ಕುಚ್

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಉತ್ತಮ ಸ್ನೇಹಿತರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ… ಈಗಾಗಲೇ ಬ್ಯಾಕ್ ಟು ಬ್ಯಾಕ್ 2ಸಿನಿಮಾಗಳ ಜೊತೆಯಲ್ಲಿ ನಟಿಸುವ ಇವರಿಬ್ಬರ ಮಧ್ಯೆ ಫ್ರೆಂಡ್ ಶಿಪ್ ಗೂ ಮಿಗಿಲಾಗಿ ಬೇರೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು ಆದರೆ ಇಬ್ಬರೂ ಕೂಡ ನಾವಿಬ್ಬರೂ ಉತ್ತಮವಾದ ಫ್ರೆಂಡ್ಸ್ ಅಷ್ಟೇ ಎಂಬ ಹೇಳಿಕೆಯನ್ನು ಕೊಟ್ಟು ಎಲ್ಲಾ ಗಾಸಿಪ್ ಗಳನ್ನು ಮುಚ್ಚಿ ಹಾಕಿದ್ದರು…

ಆದರೆ ಈಗ ಹೊಸ ವರ್ಷವನ್ನ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಗೋವಾದಲ್ಲಿ ಆಚರಣೆ ಮಾಡಿದ್ದಾರೆ…ಅದಕ್ಕೆ ಸಾಕ್ಷಿ ಹೇಳುತ್ತುವೆ ಇಬ್ಬರು ಅಪ್ ಲೋಡ್ ಮಾಡಿರುವ ಫೋಟೋಗಳು…ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದು ಇಬ್ಬರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ…ಇಬ್ಬರು ಒಂದೇ ಜಾಗದಲ್ಲಿ ನಿಂತು ಫೋಟೋ ತೆಗಿಸಿಕೊಂಡಿರೋದೆ ಇದಕ್ಕೆ ಸಾಕ್ಷಿ….

ಇನ್ನು ಇಬ್ಬರು ಹೊಸ ಹೊಸ ವರ್ಷಕ್ಕೆ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.. ಇಬ್ಬರು ಕೂಡ ಒಂದೇ ರೀತಿಯ ಕ್ಯಾಪ್ಷನ್ ಕೊಟ್ಟು ಸದ್ಯ ಹರಿದಾಡುತ್ತಿರುವ ಅಂತೆ ಕಂತೆಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಮಾಡಿದ್ದಾರೆ.. ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಅಭಿಮಾನಿಗಳ ವಲಯದಲ್ಲಿ ಮತ್ತು ಸಿನಿಮಾ ರಂಗದಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ…