- December 7, 2021
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಂದು ಶುಭ ದಿನ, ವಿಕ್ರಾಂತ್ ರೋಣ ಬಿಡುಗಡೆ ಯಾವಾಗ!?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಯಶಸ್ಸಿನ ನಂತರ ಇದೀಗ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸುದೀಪ್ ಹಾಗೂ ಚಿತ್ರತಂಡದ ದೊಡ್ಡ ಮಟ್ಟದ ಗಮನ ವಿಕ್ರಾಂತ್ ರೋಣ ಸಿನಿಮಾ ಮೇಲಿದೆ.
ವಿಕ್ರಾಂತ್ ರೋಣ ಪಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡಿದೆ. ಇದೀಗ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಬೇಕೆಂದು ಚಿತ್ರತಂಡ ಸಜ್ಜಾಗಿದೆ.

ಜನವರಿಯಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂದಿದ್ದ ಚಿತ್ರತಂಡ ರಿಲೀಸ್ ದಿನಾಂಕವನ್ನು ಫೆಬ್ರವರಿ 24, 2022 ಕ್ಕೆ 14 ಭಾಷೆಗಳಲ್ಲಿ 3D version ತೆರೆಗೆ ತರಲು ನಿರ್ಧರಿಸಿದೆ.
ಚಿತ್ರದಲ್ಲಿ ಸುದೀಪ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಿತರಂಗ ಖ್ಯಾತಿಯ ಅನುಪ್ ಬಂಡಾರಿ ನಿರ್ದೇಶದಲ್ಲಿ ನಿರೂಪ್ ಬಂಡಾರಿ ಹಾಗೂ ನೀತಾ ಅಶೋಕ್,ಶ್ರದ್ದಾ ಶ್ರೀನಾಥ್ ಹಾಗೂ ಜಾಕ್ವೆಲಿನ್ ಪರ್ನಾಂಡಿಸ್ ಅವರ ತಾರಾಗಣದಲ್ಲಿ ಚಿತ್ರ ವಿಶೇಷವಾಗಿ ಮೂಡಿಬಂದಿದೆ.
ಶಾಲಿನಿ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಿತ್ರದ ರಿಲೀಸ್ ಗಾಗಿ ಕರುನಾಡು ಕಾದಿದೆ.

