- December 7, 2021
KGF chapter 2 – ಡಬ್ಬಿಂಗ್ ಮುಗಿಸಿದ ಅಧೀರ

ಪ್ರಶಂತ್ ನೀಲ್ ನಿರ್ದೇಶನ ಯಶ್ ಅಭಿನಯ ಹಾಗೂ ಸಂಜಯ್ ದತ್ತ್ ಅಭಿನಯದಿಂದ KGF2 ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಸಂಜಯ್ ದತ್ತ್ ಅವರ ಲುಕ್ ಈಗಾಗಲೇ ಹವಾ ಪ್ರಾರಂಭಿಸಿದೆ. ಇದೀಗ ಸಂಜಯ್ ದತ್ತ್ ಅವರು ತಮ್ಮ ಅಧೀರ ಪಾತ್ರದ ಡಬ್ಬಿಂಗ್ ಮುಗಿಸಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
KGF chapter 2 ಏಪ್ರೀಲ್ 14 ರಂದು ದೇಶಾದ್ಯಂತ ರಿಲೀಸ್ ಆಗಲಿದೆ.


