- February 21, 2022
ಸಮಂತಾ ಶಾಕುಂತಲೆಯ ಅವತಾರಕ್ಕೆ ಫ್ರಾನ್ಸ್ ಕ್ಲೀನ್ ಬೋಲ್ಡ್

ಪುಷ್ಪಾ ಸಿನಿಮಾದ ಸ್ಪೆಷಲ್ ಸಾಂಗ್ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ್ದ ನಟಿ ಸಮಂತಾ ಈಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ …
ಈಗಾಗಲೇ ಸಾಕಷ್ಟು ಗ್ಲಾಮರಸ್ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಸಮಂತಾ ನಾಗಚೈತನ್ಯ ಜತೆ ವಿಚ್ಛೇದನ ನಂತರ ವಿಭಿನ್ನ ಪಾತ್ರಗಳು ಹಾಗೂ ವಿಶೇಷ ಅನ್ನಿಸುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ..

ಇತ್ತೀಚೆಗಷ್ಟೆ ಪುಷ್ಪ ಸಿನಿಮಾದಲ್ಲಿ ಹು ಅಂಟಾವ ಅಂತ ಹಾಡಿ ಕುಣಿದಿದ್ದ ಸಮಂತಾ ಈ ಶಾಕುಂತಲೆಯ ಪಾತ್ರದಲ್ಲಿ ಮಿಂಚಲಿದ್ದಾರೆ… ಹೌದು ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಸಮಂತಾ ಅಭಿನಯ ಮಾಡುತ್ತಿದ್ದು ಚಿತ್ರದ ಫಸ್ಟ್ ಲುಕ್ ರಿವಿಲ್ ಆಗಿದೆ ..
ಶಾಕುಂತಲಂ ಪೌರಾಣಿಕ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು , ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ….ಸದ್ಯ ರಿವಿಲ್ ಆಗಿರೋ ಫಸ್ಟ್ ಲುಕ್ ನಲ್ಲಿ ಸಮಂತಾ ಶಾಕುಂತಲೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ …ಒಟ್ಟಾರೆ ಸಮಂತಾ ಅವರ ಶಾಕುಂತಲೆಯ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.. ಸಿನಿಮಾ ಯಾವ ರೀತಿ ಮೂಡಿಬರಲಿದೆ ಎಂಬ ಕಾತುರ ಈಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ… ಅಂದ್ಹಾಗೆ ಸಮಂತ ಅವರಿಗೆ ಇದು ಮೊದಲ ಪೌರಾಣಿಕ ಸಿನಿಮಾ ..